Friday, December 27, 2024

ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಬಂಧನ

ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರನದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಜಾರ್ಖಂಡ್​ ಸಿಎಂ ಹೇಮಂತ್ ಸೊರೆನ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ರಾಂಚಿಯ ನಿವಾಸದಲ್ಲಿ ಹೇಮಂತ್​ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎರಡನೇ ಬಾರಿ ಜಾರ್ಖಂಡ್ ಸಿಎಂ ಆಗಿದ್ದ ಹೇಮಂತ್ ಭೂ ಹಗರಣ ಸುಳಿಯಲ್ಲಿ ಸಿಲುಕಿದ್ದರು. ಈಗಾಗಲೇ ಅಕ್ರಮಕ್ಕೆ ಸಂಬಂಧಿಸಿ 14 ಮಂದಿಯನ್ನು ಬಂಧಿಸಲಾಗಿದೆ.

ಬೆಳಗ್ಗೆಯಿಂದ ಇಡಿ ಅಧಿಕಾರಿಗಳು ಹೇಮಂತ್​ ಸೊರೆನ್ ಅವರನ್ನು ವಿಚಾರಣೆ ನಡೆಸುತ್ತಿದ್ದರು. ಬಳಿಕ, ಇಡಿ ಅವರನ್ನು ಬಂಧಿಸಿದೆ. ಈ ಬೆಳವಣಿಗೆ ಬಳಿಕ ಸಿಎಂ ಹೇಮಂತ್ ಸೊರೆನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹೇಮಂತ್ ಅವರ ಪತ್ನಿ ಕಲ್ಪನಾ ಮುಂದಿನ ಸಿಎಂ ಆಗುತ್ತಾರೆ ಎನ್ನಲಾಗಿತ್ತಿ. ಆದರೆ, ನಾಳೆ ನೂತನ ಸಿಎಂ ಆಗಿ ಚಂಪಯಿ ಸೊರೆನ್​ ಪದಗ್ರಹಣ ಮಾಡಲಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಚಂಪಯಿ ಸೊರೆನ್​ ಹಾಲಿ ರಸ್ತೆ ಮತ್ತು ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳ ಖಾತೆ ಸಚಿವರಾಗಿದ್ದಾರೆ.

RELATED ARTICLES

Related Articles

TRENDING ARTICLES