Thursday, April 25, 2024

ಟಿಪ್ಪು ಧ್ವಜ ಬೆನ್ನಲ್ಲೇ, ಮೈಸೂರಿನಲ್ಲಿ ಮತ್ತೆ ಹಸಿರು ಬಾವುಟ ಹಾರಾಟ

ಮೈಸೂರು : ರಾಜ್ಯದಲ್ಲಿ ಧ್ವಜ ದಂಗಲ್ ನಿಲ್ಲುವಂತೆ ಕಾಣುತ್ತಿಲ್ಲ. ಹನುಮ ಧ್ವಜ ಬೆನ್ನಲ್ಲೇ ಹಸಿರು ಧ್ವಜ ಹಾಗೂ ಟಿಪ್ಪು ಧ್ವಜ ಹಾರಾಡಿತ್ತು. ಇದೀಗ, ಮತ್ತೆ ಮೈಸೂರಿನಲ್ಲಿ ಹಸಿರು ಧ್ವಜ ಹಾರಿಸಲಾಗಿದೆ.

ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್​ನಲ್ಲಿ ಹಸಿರು ಬಾವುಟ ಹಾರಾಟ ಪ್ರಕರಣ ಮಾಸುವ ಬೆನ್ನಲ್ಲೇ ಮೈಸೂರಿನಲ್ಲಿ ಟಿಪ್ಪು ಹಾಗೂ ಹಸಿರು ಬಾವುಟ ರಾರಾಜಿಸಿವೆ.

ಮೈಸೂರಿನ ಕೈಲಾಸಪುರಂನ 4ನೇ ಮುಖ್ಯರಸ್ತೆಯ ಅಂಬೇಡ್ಕರ್ ಪಾರ್ಕ್​ ಸಮೀಪದ ಶ್ರೀನಿವಾಸ ದೇವಸ್ಥಾನ ರಸ್ತೆಯಲ್ಲಿ ಪಕ್ಕದಲ್ಲೇ ಹಸಿರು ಧ್ವಜ ಹಾರಾಡುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ತಮ್ಮ ಎಕ್ಸ್​ ಖಾತೆಯಲ್ಲಿ ಫೋಟೋ ಸಮೇತ ಪೋಸ್ಟ್​ ಮಾಡಿ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ. ‘ಮೈಸೂರು ಜಿಲ್ಲಾಡಳಿತಕ್ಕೆ ಧನ್ಯವಾದಗಳು. ಆದರೆ, ಒಂದು ಬಾವುಟ ತೆಗೆದು ಪಕ್ಕದಲ್ಲೇ ಇನ್ನೊಂದನ್ನೇಕೆ ಬಿಟ್ಟಿದ್ದೀರಿ..? ನಾನೇ ಸ್ಥಳಕ್ಕೆ ಬಂದು ತೋರಿಸಬೇಕಾ..? ಕೈಲಾಸ್ ಪುರಂ, 4 ನೇ ಮುಖ್ಯರಸ್ತೆ, ಅಂಬೇಡ್ಕರ್ ಪಾರ್ಕ್, ಶ್ರೀನಿವಾಸ ದೇವಸ್ಥಾನ ರಸ್ತೆಯಲ್ಲಿ ಮತ್ತೊಂದು ಧ್ವಜವಿರುವುದು ಕಾಣುತ್ತಿಲ್ಲವೇ..?’ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES