Sunday, November 3, 2024

ಇಂಗ್ಲೆಂಡ್​ಗೆ 28 ರನ್​ಗಳ ಜಯ : ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಭಾರತ

ಬೆಂಗಳೂರು : ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​ 28 ರನ್​ಗಳ ಗೆಲುವು ದಾಖಲಿಸಿತು. ಈ ಮೂಲಕ ಭಾರತ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದೆ.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 231 ರನ್​ ಗುರಿ ಬೆನ್ನತ್ತಿದ ಭಾರತ 202 ರನ್​ಗಳಿಗೆ ಆಲೌಟ್​ ಆಯಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಇಂಗ್ಲೆಂಡ್, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

196 ರನ್​ ಸಿಡಿಸಿದ ಒಲೀ ಪೋಪ್ ಹಾಗೂ ಬೌಲಿಂಗ್​ನಲ್ಲಿ 7 ವಿಕೆಟ್ ಪಡೆದ ಟಾಮ್ ಹಾರ್ಟ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪೋಪ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಭಾರತದ ಪರ ಯಶಸ್ವಿ ಜೈಸ್ವಾಲ್ 15, ನಾಯಕ ರೋಹಿತ್ ಶರ್ಮಾ 39, ಶುಭ್​ಮನ್ ಗಿಲ್ 0, ಕೆ.ಎಲ್. ರಾಹುಲ್ 22, ಅಕ್ಸರ್ ಪಟೇಲ್ 17, ಶ್ರೇಯಸ್​ ಅಯ್ಯರ್ 13, ರವೀಂದ್ರ ಜಡೇಜಾ 2, ಭರತ್ 28, ರವಿಚಂದ್ರನ್ ಅಶ್ವಿನ್ 28 ರನ್ ಗಳಿಸಿದರು. ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲಿ 7, ಜಾಕ್ ಹಾಗೂ ರೂಟ್ ತಲಾ 1 ವಿಕೆಟ್ ಪಡೆದರು.

ಕೊನೆ 6 ಸರಣಿಗಳಲ್ಲಿ ಭಾರತಇಂಗ್ಲೆಂಡ್ (ಮೊದಲ ಟೆಸ್ಟ್)

2014 : ಭಾರತಕ್ಕೆ ಸೋಲು

2016 : ಡ್ರಾ

2018 : ಭಾರತಕ್ಕೆ ಸೋಲು

2021 : ಭಾರತಕ್ಕೆ ಸೋಲು

2021 : ಡ್ರಾ

2024 : ಭಾರತಕ್ಕೆ ಸೋಲು

RELATED ARTICLES

Related Articles

TRENDING ARTICLES