ಮಣಿಪಾಲ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳಿದ್ದ ಬ್ಯಾಗ್ ಕಳವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಬೆಂಗಳೂರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಕುಮಟಾದ ಅಭಿನ್ ವೈದ್ಯ(19) ಎಂಬುವವರು ಕಾಲೇಜಿಗೆ ರಜೆ ಇದ್ದ ಕಾರಣ ಜನವರಿ 23ರಂದು ರಾತ್ರಿ ಬೆಂಗಳೂರಿನಿಂದ ರೈಲು ಪ್ರಯಾಣದ ಮೂಲಕ ಹೊರಟಿದ್ದು, ರಾತ್ರಿ 11-45 ಗಂಟೆ ಸುಮಾರಿಗೆ ರೈಲು ಮೈಸೂರು ನಿಲ್ದಾಣ ತಲುಪಿತ್ತು, ಆಗ ಅಭಿನ್ ತಮ್ಮ ಬ್ಯಾಗ್‌ನ್ನು ಸೀಟಿನ ಮೇಲೆ ಇಟ್ಟು ಮೂತ್ರ ವಿರ್ಸಜನೆಗೆ ಹೋಗಿದ್ದರು.
ಇದನ್ನೂ ಓದಿ: Powertv Impact: ಬಿಟ್ ಕಾಯಿನ್ ಹಗರಣದಲ್ಲಿ ಇಬ್ಬರು ಪೊಲೀಸರ ಬಂಧನ!
ಈ ವೇಳೆ ಕಳ್ಳರು, ಲಾಪ್ಟಾಪ್, ಇಯರ್ ಬಡ್ ಹಾಗೂ ಚಿನ್ನದ ಸರ ಮತ್ತು ಬಟ್ಟೆಗಳಿದ್ದ ಬ್ಯಾಗ್‌ನ್ನು ಕದ್ದು ಪರಾರಿಯಾಗಿದ್ದಾರೆ. ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು 1.80ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.