Monday, December 23, 2024

ಅಧಿಕಾರ ‘ಕೈ’ಗೆ ಸಿಗುತ್ತಿದ್ದಂತೆ ರಾಮ ರಾಜ್ಯ ತುಘಲಕ್ ರಾಜ್ಯವಾಗಿ ಬದಲಾಗಿದೆ: ಬಿಜೆಪಿ ವಾಗ್ದಾಳಿ

ಬೆಂಗಳೂರು: ಕರ್ನಾಟಕದ ಅಧಿಕಾರ ಕಾಂಗ್ರೆಸ್‌ ‘ಕೈ’ಗೆ ಸಿಗುತ್ತಿದ್ದಂತೆ ರಾಮ ರಾಜ್ಯ ತುಘಲಕ್ ರಾಜ್ಯವಾಗಿ ಬದಲಾಗಿದೆ.ಇದರ ಪರಿಣಾಮ ಅರಾಜಕತೆ ಸೃಷ್ಟಿಯಾಗಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಹಾವೇರಿ ಗ್ಯಾಂಗ್​ ರೇಪ್​ ಪ್ರಕರಣವಾಗಿ ಎಕ್ಸ್‌ ತಾಣದಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ಮಹಿಳೆಯರ ಮಾನಭಂಗ, ಹಲ್ಲೆ, ಅತ್ಯಾಚಾರದಂತಹ ಪ್ರಕರಣಗಳು ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿವೆ ಎಂದು ಆರೋಪಿಸಿದೆ.

ಇದನ್ನೂ ಓದಿ: ಲೋಕಸಭೆ ಟಾಸ್ಕ್ ಗೆಲ್ಲದೇ ಹೋದರೆ ಸಚಿವರ ತಲೆದಂಡ: ಸಚಿವ ಜಿ.ಪರಮೇಶ್ವರ್

ಪಿಎಫ್ಐ ಗೂಂಡಾಗಳು ದಲಿತರ ಮನೆ ಸುಟ್ಟು ಹಾಕಿದರೂ, ಪೊಲೀಸ್ ಠಾಣೆಗೆ ಬೆಂಕಿ ಇಟ್ಟರೂ, ಯುವತಿ ಮೇಲೆ ಅತ್ಯಾಚಾರ ಮಾಡಿದರೂ, ಹಿಂದೂಗಳ ಕೊಲೆ ಮಾಡಿದರೂ, ಭರತ ಭೂಮಿಯಲ್ಲಿ ಹುಟ್ಟಿ ಬಾಂಬ್ ಸ್ಫೋಟಿಸಿದರೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಅವರ ವೋಟ್ ಬ್ಯಾಂಕ್‌ಗಾಗಿ ಅವರು ಅಮಾಯಕರರು ಇದೇ ಕರುನಾಡಿನ ದುರಂತ ಎಂದು ಟೀಕಿಸಿದ್ಧಾರೆ.

 

RELATED ARTICLES

Related Articles

TRENDING ARTICLES