Wednesday, January 22, 2025

ನೆಚ್ಚಿನ ಶಿಕ್ಷಕನಿಗೆ ಬೈಕ್ ಗಿಫ್ಟ್ ನೀಡಿ ಬೀಳ್ಕೊಟ್ಟ ವಿದ್ಯಾರ್ಥಿಗಳು

ಶಿವಮೊಗ್ಗ : 16 ವರ್ಷಗಳಿಂದ ಒಂದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕನಿಗೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ವಿಭಿನ್ನವಾಗಿ ಬೀಳ್ಕೊಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಸಂತೋಷ್ ಕಾಂಚನ್​ಗೆ ವಿಶೇಷವಾಗಿ ಪಲ್ಸರ್‌ ಬೈಕ್ ರೂಪದಲ್ಲಿ ಗುರು ಕಾಣಿಕೆ ನೀಡಿದ್ದಾರೆ.

1ರಿಂದ 7ನೇ ತರಗತಿವರೆಗೂ ಈ ಶಾಲೆಯಲ್ಲಿ 13 ಜನ ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಕುಗ್ರಾಮವಾಗಿದ್ರೂ ಸಹ ವರ್ಗಾವಣೆಯಾಗದೇ ಮಕ್ಕಳ ಏಳಿಗೆಗೆ ಶ್ರಮಿಸಿದ ಶಿಕ್ಷಕನಿಗೆ ಬೈಕ್ ಗಿಫ್ಟ್​​ ನೀಡಿದ್ದಾರೆ.

ಈ ಸುದ್ದಿ ಓದಿದ್ದಿರಾ? : ಶ್ರೀರಾಮನ ಸೇವೆಗಾಗಿ ಬೆಳ್ಳಿಯ ಪೂಜಾ ಸಾಮಗ್ರಿ ಸಮರ್ಪಿಸುತ್ತಿದ್ದೇವೆ : ವೀರೇಂದ್ರ ಹೆಗ್ಗಡೆ

ಇನ್ನು ಇಂಟ್ರೆಸ್ಟಿಂಗ್ ಅಂದರೆ ಕೊಡಚಾದ್ರಿ ತಟದಲ್ಲಿರುವ ವಳೂರಿಗೆ ಯಾವುದೇ ವಾಹನ ವ್ಯವಸ್ಥೆಯಿರಲಿಲ್ಲ. ಯಾರೇ ಆರೋಗ್ಯ ತಪ್ಪಿದ್ದರೂ ಸಹ ಶಿಕ್ಷಕರ ಬಳಿ ಇದ್ದ ಒಂದೇ ಒಂದು ಬೈಕ್​​ ಗಾಮಸ್ಥರ ಆ್ಯಂಬುಲೆನ್ಸ್​​​ ಆಗಿತ್ತು. ಈ ಹಿನ್ನೆಲೆ ಕೃತಜ್ಞತಾ ಭಾವದಿಂದ ಗ್ರಾಮಸ್ಥರು ಬೀಳ್ಕೊಡುಗೆ ನೀಡುವಾಗ ಬೈಕ್​ ನೀಡಿದ್ದಾರೆ.

RELATED ARTICLES

Related Articles

TRENDING ARTICLES