ಹಾವೇರಿ: ಅನ್ಯ ಕೋಮಿನ ಮಹಿಳೆಯೊಂದಿಗೆ ಲಾಡ್ಜ್ಗೆ ಬಂದಿದ್ದ ಯುವಕನಿಗೆ 12 ಮಂದಿಯಿಂದ ತಂಡವೊಂದು ಥಳಿಸಿರುವ ಘಟನೆ ಜ.7ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Hangalಸಮೀಪದ ನಾಲ್ಕರ ಕ್ರಾಸ್ ಬಳಿಯ ಲಾಡ್ಜ್ಗೆ ಶಿರಸಿ ಮೂಲದವರೆನ್ನಲಾದ ಅನ್ಯ ಕೋಮಿನ ಯುವತಿಯೊಂದಿಗೆ ಯುವಕನೋರ್ವ ಆಗಮಿಸಿರುವ ಮಾಹಿತಿ ಪಡೆದ 5-6 ಯುವಕರ ಗುಂಪು ಲಾಡ್ಜ್ಗೆ ನುಗ್ಗಿ ಯುವಕ-ಯುವತಿಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ನಂತರ ಯುವತಿಯನ್ನು ಅಜ್ಞಾತ ಸ್ಥಳವೊಂದಕ್ಕೆ ಕೊಂಡೊಯ್ದ ಯುವಕರು, ಮಾನಸಿಕ ಕಿರುಕುಳ ಸೇರಿದಂತೆ ದೈಹಿಕ ಹಲ್ಲೆ ನಡೆಸಿರುವುದಾಗಿ ಯುವತಿ ಹಾಗೂ ಆಕೆಯ ಪತಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ತಲುಪಿತು ದೇಶದ ಅತೀ ದೊಡ್ಡ ಘಂಟೆ
ಸಾರಿಗೆ ಇಲಾಖೆಯಲ್ಲಿ ಚಾಲಕನಾಗಿರುವ ಸೋಮಶೇಖರ ಎಂಬ ಯುವಕ ಯುವತಿಯೊಂದಿಗೆ ಆಗಮಿಸಿದ್ದಾಗ ಅನ್ಯ ಕೋಮಿನ ಯುವಕರು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾನೆ.
ಅಜ್ಞಾತ ಸ್ಥಳಕ್ಕೆ ಯುವತಿಯನ್ನು ಕೊಂಡೊಯ್ದ ಯುವಕರ ಗುಂಪು ಯುವತಿಯ ಮೇಲೆ ಸಾಮೂಹಿಕ ಹಲ್ಲೆ ನಡೆಸಿರುವುದಾಗಿ ಆಕೆಯ ಪತಿ ತಿಳಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಅಕ್ಕಿಆಲೂರ ಗ್ರಾಮದ ಅಲ್ತಾಫ್ ಹಾಗೂ ಮರ್ದಾನ್ಸಾಬ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದವರ ಬಂಧನಕ್ಕೆ ತಂಡವನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.
ಎಸ್ಪಿ ಭೇಟಿ
ಬುರ್ಖಾ ಧರಿಸಿದ್ದ ಅನ್ಯ ಕೋಮಿನ ಯುವತಿ ಹಾಗೂ ಇನ್ನೊಂದು ಸಮುದಾಯದ ಯುವಕನ ಮೇಲೆ ಅನ್ಯ ಕೋಮಿನ ಯುವಕರ ಗುಂಪು ನೈತಿಕ ಪೊಲೀಸ್ಗಿರಿ ತೋರಿದ ಘಟನೆಗೆ ಸಂಬಂಧಿಸಿದಂತೆ ಹಾವೇರಿ ಎಸ್ಪಿ ಅಂಶುಕುಮಾರ ಹಾನಗಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಐದಾರು ಜನರು ಕೊಠಡಿಗೆ ನುಗ್ಗಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಕುರಿತು ದೂರು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.
ಇಬ್ಬರ ಬಂಧನ
ಈ ಪ್ರಕರಣದಲ್ಲಿ 5 ರಿಂದ 6 ಜನರಿದ್ದಾರೆ. ಸದ್ಯ ಇಬ್ಬರನ್ನ ಬಂಧಿಸಲಾಗಿದೆ. ಇನ್ನುಳಿದವರ ಬಂಧನಕ್ಕೆ ತಂಡ ರಚಿಸಲಾಗಿದೆ. ಗ್ಯಾಂಗ್ ರೇಪ್ ಬಗ್ಗೆ ಕಂಪ್ಲೇಂಟ್ ಕೊಟ್ಟಿಲ್ಲ. ಆರೋಪಿಗಳು ಈ ಮುಂಚೆ ಇಂತಹ ಪ್ರಕರಣದಲ್ಲಿ ಭಾಗಿಯಾದ್ದರಾ ಎನ್ನುವುದನ್ನು ತನಿಖೆ ಮಾಡುತ್ತೇವೆ ಎಂದಿದ್ದಾರೆ.
ಹಲ್ಲೆಗೊಳಗಾದ ಬಸ್ ಚಾಲಕ ಸೋಮಶೇಖರ ನಾಪತ್ತೆಯಾಗಿದ್ದಾನೆ. ಈತನ ಹುಡುಕಾಟಕ್ಕೆ ಪೊಲೀಸರಿಗೆ ಸೂಚಿಸಲಾಗಿದೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಕಲೆ ಹಾಕಲಾಗಿದೆ.
ಸಂತ್ರಸ್ತ ಯುವತಿಯನ್ನು ವಿಚಾರಣೆಗೊಳಪಡಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಬಂಧನದ ನಂತರ ಪೂರ್ಣ ಮಾಹಿತಿ ಲಭ್ಯವಾಗಲಿದೆ.