Wednesday, January 22, 2025

ಫುಟ್ಬಾಲ್ ದಿಗ್ಗಜ ಆಟಗಾರ ಫ್ರಾಂಜ್ ಬೆಕೆನ್‌ಬಾರ್ ನಿಧನ

ಬೆಂಗಳೂರು : ಫುಟ್ಬಾಲ್ ದಿಗ್ಗಜ ಆಟಗಾರ ಜರ್ಮನಿಯ ಫ್ರಾಂಜ್ ಬೆಕೆನ್ಬಾರ್ (78) ಅವರು ನಿಧನರಾಗಿದ್ದಾರೆ.

ಫ್ರಾಂಜ್​ ಕುಟುಂಬದ ಮೂಲಗಳು ಅವರ ನಿಧನದ ಸುದ್ದಿಯನ್ನು ಖಚಿತಪಡಿಸಿವೆ ಎಂದು ವರದಿಯಾಗಿದೆ. ಈ ದಿಗ್ಗಜ ಕೇವಲ ಆಟಗಾರನಾಗಿ, ಅಲ್ಲದೇ ಕೋಚ್​ ಆಗಿ ಜರ್ಮನಿ ದೇಶಕ್ಕೆ ಎರಡು ಫಿಫಾ ವಿಶ್ವಕಪ್​ ಗೆದ್ದು ಕೊಟ್ಟಿದ್ದಾರೆ.

ಫ್ರಾಂಜ್ ಬೆಕೆನ್ಬಾರ್ ಆಟಗಾರರಾಗಿ 1974ರಲ್ಲಿ ಜರ್ಮನಿಯು ಫಿಫಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು, 1990ರಲ್ಲಿ ಇವರ ಮಾರ್ಗದರ್ಶನ(ಕೋಚ್​)ದಲ್ಲಿ ಜರ್ಮನಿ ಮತ್ತೊಮ್ಮೆ ಫಿಫಾ ವಿಶ್ವಕಪ್ ಗೆದ್ದು ಬೀಗಿತ್ತು.

RELATED ARTICLES

Related Articles

TRENDING ARTICLES