Wednesday, December 25, 2024

ಕೇಂದ್ರ ಸರ್ಕಾರ ನ್ಯಾಯ ಮರೆತಿದೆ : ಟ್ರಕ್ ಚಾಲಕರ ಮುಷ್ಕರಕ್ಕೆ ರಾಹುಲ್ ಗಾಂಧಿ ಬೆಂಬಲ

ನವದೆಹಲಿ : ಟ್ರಕ್​ ಚಾಲಕರ ಮುಷ್ಕರಕ್ಕೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಪ್ರತಿಪಕ್ಷಗಳ ಜತೆ ಮಾತುಕತೆ ನಡೆಸದೆ ಕೇಂದ್ರ ಸರ್ಕಾರ ಕಾನೂನು ರೂಪಿಸುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವದ ಆತ್ಮದ ಮೇಲಿನ ನಿರಂತರ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

150ಕ್ಕೂ ಹೆಚ್ಚು ಸಂಸದರನ್ನು ಅಮಾನತುಗೊಳಿಸಿದಾಗ, ಪಾರ್ಲಿಮೆಂಟ್‌ನಲ್ಲಿ ಶಾಹೆನ್‌ಶಾ ಅವರು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿರುವ ಚಾಲಕರ ವಿರುದ್ಧ ಕಾನೂನನ್ನು ಜಾರಿಗೆ ತಂದರು. ಇದು ಮಾರಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಷ್ಟಪಟ್ಟು ದುಡಿಯುವ ವರ್ಗವನ್ನು ಕಠಿಣ ಕಾನೂನು ಕುಲುಮೆಗೆ ಎಸೆಯುವುದು, ಅವರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಪ್ರಜಾಸತ್ತೆಯನ್ನು ಚಾಟಿ ಹಿಡಿದು ನಡೆಸುತ್ತಿರುವ ಸರ್ಕಾರ ‘ಸಾಮ್ರಾಟನ ಆದೇಶ’ ಮತ್ತು ‘ನ್ಯಾಯ’ ಎಂಬ ವ್ಯತ್ಯಾಸವನ್ನೇ ಮರೆತುಬಿಟ್ಟಿದೆ ಎಂದು ತಮ್ಮ ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES