Sunday, May 12, 2024

ಡಿ ಬಾಸ್ ‘ಕಾಟೇರ’ ಮುಂದೆ ಸೋಲೊಪ್ಪಿಕೊಂಡ ‘ಸಲಾರ್’

ಬೆಂಗಳೂರು : ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದೆ. ಆದರೆ, ಕರ್ನಾಟಕದಲ್ಲಿ ನಟ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ಆರ್ಭಟದ ಮುಂದೆ ಸೋಲೊಪ್ಪಿಕೊಂಡಿದೆ.

ಕನ್ನಡದಲ್ಲಿ ಸಲಾರ್ 10 ದಿನದಲ್ಲಿ 35 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ಅಪ್ಪಟ ಕನ್ನಡದ ಚಿತ್ರ ಎರಡನೇ ದಿನದಲ್ಲಿ ಆ ದಾಖಲೆಯನ್ನು ಉಡೀಸ್ ಮಾಡಿದೆ.

ಡಿ ಬಾಸ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರವು ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ಹಳ್ಳಿ ಬ್ಯಾಕ್ ಡ್ರಾಪ್‌ನಲ್ಲಿ ಹಳ್ಳಿಗಾಡಿನ ಕಂಟೆಂಟ್‌ನೊಂದಿಗೆ ಈ ಸಿನಿಮಾ ಮೂಡಿಬಂದಿದೆ. ಹೀಗಾಗಿ, ಬಾಕ್ಸ್ ಆಫೀಸ್‌ನಲ್ಲಿ ಹಣದ ಮಳೆ ಸುರಿಯುತ್ತಿದೆ. ಕನ್ನಡದಲ್ಲಿ ಈ ಚಿತ್ರ ಕೇವಲ ಎರಡೇ ದಿನಗಳಲ್ಲಿ 37.14 ಕೋಟಿ ಕಲೆಕ್ಷನ್ ಮಾಡಿದೆ. ಮೂರು ದಿನದಲ್ಲಿ ಬರೋಬ್ಬರಿ 58.8 ಕೋಟಿ ರೂ. ದಾಟಿದೆ.

ಕಾಟೇರನ ಆರ್ಭಟದಿಂದ ಸಲಾರ್​ ಚಿತ್ರಕ್ಕೆ ಭಾರಿ ಪೆಟ್ಟು ಬಿದ್ದಿದೆ. ಇದರೊಂದಿಗೆ ಕನ್ನಡದಲ್ಲಿ ಸಲಾರ್ ಚಿತ್ರವನ್ನು ಸಂಪೂರ್ಣವಾಗಿ ಥಿಯೇಟರ್​ನಿಂದ ಕೈಬಿಡುವ ಸೂಚನೆ ಕಂಡುಬಂದಿದೆ. ಇನ್ನುಮುಂದೆ ಥಿಯೇಟರ್ ಗಳನ್ನು ತೆಗೆಯಬೇಕಾದ ಸ್ಥಿತಿ ಇದೆ. ಈಗಾಲೇ ‘ಸಲಾರ್’ ಥಿಯೇಟರ್ ಗಳನ್ನು ‘ಕಾಟೇರಾ”ಗೆ ಹಂಚಿಕೆ ಮಾಡುತ್ತಿರುವುದು ಗೊತ್ತೇ ಇದೆ.

ಸಲಾರ್ ಹಿನ್ನಡೆಗೆ ಕಾರಣವೇನು?

ಕನ್ನಡದಲ್ಲಿ ಸಲಾರ್ ಚಿತ್ರದ ಈ ಹಿನ್ನಡೆಗೆ ಕಾರಣ.. ಈಗಾಗಲೇ ‘ಉಗ್ರಂ’ ಸಿನಿಮಾ ತೆರೆ ಕಂಡು ಹಿಟ್ ಆಗಿತ್ತು. ಸಲಾರ್ ಉಗ್ರಂನ ವಿಸ್ತರಣೆಯಾಗಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದು ಗೊತ್ತೇ ಇದೆ. ಇದರಿಂದಾಗಿ ಕನ್ನಡ ಪ್ರೇಕ್ಷಕರು ಈ ಸಿನಿಮಾ ನೋಡಲು ಬಯಸುತ್ತಿಲ್ಲ. ಈ ಎಫೆಕ್ಟ್ ಸಲಾರ್​ಗೆ ತಟ್ಟಿದೆ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರದರ್ಶನ ಕಾಣುತ್ತಿಲ್ಲ.

‘ಕಾಟೇರ’ಗೆ ಮನ ಸೋತ ಪ್ರೇಕ್ಷಕ

ಸಲಾರ್​ ಚಿತ್ರದಲ್ಲಿ ಕೌಟುಂಬಿಕ ಅಂಶಗಳಿಲ್ಲ. ಹೀಗಾಗಿ, ಫ್ಯಾಮಿಲಿ ಪ್ರೇಕ್ಷಕರು ಸಲಾರ್​ನಿಂದ ದೂರ ಉಳಿದಿದ್ದರು. ಮಾಸ್, ಆ್ಯಕ್ಷನ್ ಅಂಶಗಳು ಮಾಸ್ ಪ್ರೇಕ್ಷಕರು ಮತ್ತು ಯುವಜನರನ್ನು ಮಾತ್ರ ಆಕರ್ಷಿಸುತ್ತಿವೆ. ಆದರೆ, ಫ್ಯಾಮಿಲಿ ಪ್ರೇಕ್ಷಕರು ಬಾರದೆ ಇದ್ದರೆ ಸಿನಿಮಾ ಹಿಟ್ ಆಗಲ್ಲ. ಕಾಟೇರ ಚಿತ್ರದಲ್ಲಿ ಮಾಸ್, ಆ್ಯಕ್ಷನ್ ಹಾಗೂ ಕೌಟುಂಬಿಕ ಅಂಶಗಳಿವೆ. ಹೀಗಾಗಿ, ಪ್ರೇಕ್ಷಕರು ಕಾಟೇರ ಚಿತ್ರಕ್ಕೆ ಮನ ಸೋತಿದ್ದಾರೆ.

RELATED ARTICLES

Related Articles

TRENDING ARTICLES