Sunday, May 12, 2024

ಕುಂದಾನಗರಿಯಲ್ಲಿ ಕನ್ನಡ ಶಾಲೆಯ ಮಕ್ಕಳಿಗೆ ಕೊಠಡಿಯೇ ಇಲ್ಲ

ಬೆಳಗಾವಿ : ಕುಂದಾನಗರಿ ಬೆಳಗಾವಿ ತಾಲೂಕಿನ ನಂದಿಹಳ್ಳಿ ಗ್ರಾಮದ ಕನ್ನಡ ಮಕ್ಕಳಿಗೆ ಸುಸಜ್ಜಿತ ಕೊಠಡಿ ಇಲ್ಲದಂತಾಗಿದೆ.

ಕನ್ನಡ ಶಾಲೆಯ ಮಕ್ಕಳಿಗೆ ಕೊಠಡಿ ಇಲ್ಲದಿರುವುದಕ್ಕೆ ಆವರಣದಲ್ಲಿ ಪಾಠ ಮಾಡಲಾಗುತ್ತಿದೆ. ಒಂದೇ ಆವರಣದಲ್ಲಿರುವ ಸರ್ಕಾರಿ ಕನ್ನಡ ಹಾಗೂ ಮರಾಠಿ ಪ್ರಾಥಮಿಕ ಶಾಲೆಗಳಿವೆ.

ಮರಾಠಿ ಮಾಧ್ಯಮದಲ್ಲಿ 150 ಹಾಗೂ ಕನ್ನಡ ಮಾಧ್ಯಮದಲ್ಲಿ 85 ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿದ್ದಾರೆ. ಮರಾಠಿ ಶಾಲೆಯ ಕೊಠಡಿ 10 ಇದ್ರೆ ಕನ್ನಡ ಮಾಧ್ಯಮ ಮಕ್ಕಳಿಗೆ ಎರಡು ಕೊಠಡಿಗಳಿವೆ. ಒಂದೇ ಕೊಠಡಿಯಲ್ಲಿ ಕನ್ನಡ ಮಾಧ್ಯಮದ ಮೂರು ತರಗತಿಯ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.

ಸೂಕ್ತ ಸ್ಥಳ ಇಲ್ಲದಿರುವುದಕ್ಕೆ ಆವರಣದಲ್ಲಿ ಕನ್ನಡ ಶಾಲೆಯ ಮಕ್ಕಳಿಗೆ ಪಾಠ ಮಾಡಲಾಗಿದೆ. ಕನ್ನಡ ಮಕ್ಕಳಿಗೆ ಸೂಕ್ತ ಕೊಠಡಿ ವ್ಯವಸ್ಥೆ ಕಲ್ಪಿಸುವಂತೆ ಕನ್ನಡ ಹಾಗೂ ಮರಾಠಿ ಶಾಲೆಯ ಶಿಕ್ಷಕರಿಗೆ ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES