Sunday, May 12, 2024

ಏಕದಿನ ಕ್ರಿಕೆಟ್​ಗೆ ಡೇವಿಡ್ ವಾರ್ನರ್ ವಿದಾಯ

ಬೆಂಗಳೂರು : ಹೊಸ ವರ್ಷದ ಮೊದಲ ದಿನವೇ ಆಸ್ಟ್ರೇಲಿಯಾದ ಐಕಾನಿಕ್ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್‌ನೊಂದಿಗೆ ಏಕದಿನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಅಂತಿಮ ಟೆಸ್ಟ್ ಆಡಲಿರುವ ವಾರ್ನರ್, ಇದೀಗ ನಾನು 50 ಓವರ್‌ಗಳ ಮಾದರಿಯಿಂದಲೂ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳಿದ್ದಾರೆ. ಹಾಗೆಯೇ ಅಗತ್ಯವಿದ್ದರೆ ಚಾಂಪಿಯನ್ಸ್ ಟ್ರೋಫಿಗೆ ಲಭ್ಯವಿರುತ್ತೇನೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

‘ನಾನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ವಿಶ್ವಕಪ್‌ ನನ್ನ ಕೊನೆಯ ಪಂದ್ಯವಾಗಿದೆ. ಆ ಗೆಲುವನ್ನು ಸಾಧಿಸಿದ್ದೇನೆ ಮತ್ತು ಭಾರತದಲ್ಲಿ ಅದನ್ನು ಗೆದ್ದುಕೊಂಡಿದ್ದೇನೆ, ಇದು ಒಂದು ದೊಡ್ಡ ಸಾಧನೆ ಎಂದು ನಾನು ಭಾವಿಸುತ್ತೇನೆ’ ಎಂದು ವಾರ್ನರ್ ಹೇಳಿದ್ದಾರೆ. ವಾರ್ನರ್ ಅವರು SCG ಕ್ರೀಡಾಂಗಣದಲ್ಲಿ ತಮ್ಮ ಕೊನೆಯ ಟೆಸ್ಟ್ ಆಡಲು ನಿರ್ಧರಿಸಿದ್ದಾರೆ.

ಏಕದಿನದಲ್ಲಿ ಡೇವಿಡ್ ವಾರ್ನರ್ ಸಾಧನೆ

ಇನ್ನಿಂಗ್ಸ್ : 159

ರನ್‌ಗಳು : 6,932

ಸರಾಸರಿ : 45.01

ಸ್ಟ್ರೈಕ್ ರೇಟ್ : 97.26

ಶತಕ : 22

ಅರ್ಧಶತಕ : 33

RELATED ARTICLES

Related Articles

TRENDING ARTICLES