Sunday, December 8, 2024

ಕಾಲು ಕಟ್ಟಿದ ಸ್ಥಿತಿಯಲ್ಲಿ ಇಬ್ಬರ ಅಸ್ಥಿಪಂಜರ ಪತ್ತೆ! ಇದು ಕೊಲೆನಾ? ಆತ್ಮಹತ್ಯೆನಾ?

ಚಿತ್ರದುರ್ಗ: ಪಾಳು ಬಿದ್ದ ಮನೆಯಲ್ಲಿ ಸಿಕ್ಕಿರುವ ಐವರ ಅಸ್ಥಿಪಂಜರಗಳ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ನಿನ್ನೆ ಶನಿವಾರ ಬಸವೇಶ್ವರ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಅಸ್ಥಿಪಂಜರದ ಮರಣೋತ್ತರ ಪರೀಕ್ಷೆಯನ್ನು ಮುಗಿಸಿದ್ದು, ಇಬ್ಬರ ಕಾಲು ಕಟ್ಟಿದ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ ಎನ್ನಲಾಗಿದೆ. ನಂತರ ಮೃತರ ಸಂಬಂಧಿಕರು ಅಂತ್ಯಕ್ರಿಯೆ ಮುಗಿಸಿದ್ದಾರೆ.

ಮೃತರ ಮೂಳೆ, ಚರ್ಮ ಸಂಗ್ರಹಿಸಿರುವ ವೈದ್ಯಕೀಯ ಸಿಬ್ಬಂದಿ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳಿಸಿದ್ದಾರೆ. ಸದ್ಯ ಅಸ್ಥಿಪಂಜರ ಪರೀಕ್ಷೆ ವೇಳೆ ಇಬ್ಬರ ಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಮಹಿಳೆ ಹಾಗೂ ಪುರುಷನ ಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಲು ಕಟ್ಟಿದ್ದು ಸತ್ಯವಾದರೆ ಕೊಲೆ ನಡೆದಿದೆಯೆ ಎಂಬ ಶಂಕೆ ವ್ಯಕ್ತವಾಗುತ್ತದೆ. ಸದ್ಯ ಪೊಲೀಸರು ಪೋಸ್ಟ್ ಮಾರ್ಟಂ ಹಾಗೂ ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಯಾರೋ ನನ್ನ ಮೇಲೆ ಮಾಟ ಮಾಡಿಸಿರಬೇಕು: ವಿ. ಸೋಮಣ್ಣ

ಸದ್ಯ ಕಾಲು ಕಟ್ಟಲಾಗಿತ್ತೆಂಬುದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಕಾಲು ಕಟ್ಟಿದ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಬಗ್ಗೆ ತಿಳಿದಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪೋಸ್ಟ್ ಮಾರ್ಟಂ, ಎಫ್ ಎಸ್ ಎಲ್ ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರಾ? ಕೊಲೆಯೋ? ಅಥವಾ ಅನಾರೋಗ್ಯದಿಂದ ಮೃತಪಟ್ಟಿದ್ದಾ ಎಂಬುದು ತಿಳಿಯಲಿದೆ.

ಈ ಪ್ರಕರಣ ಕೊಲೆನಾ ಅಥವಾ ಆತ್ಮಹತ್ಯೆನಾ ಎಂಬುದನ್ನು ತಿಳಿಯುವುದೇ ಪೊಲೀಸರಿಗೆ ಹರಸಾಹಸವಾಗಿದೆ.

 

RELATED ARTICLES

Related Articles

TRENDING ARTICLES