Wednesday, January 22, 2025

ಅಧಿಕಾರಕ್ಕೆ ಬಂದರೆ ದೇಶದಲ್ಲಿ ಜಾತಿ ಗಣತಿ : ರಾಹುಲ್ ಗಾಂಧಿ

ಮಹಾರಾಷ್ಟ್ರ : ದೇಶದಲ್ಲಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿ ನಡೆಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್‌ನ 139ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಓಬಿಸಿ(OBC)ಗಳ ಬಗ್ಗೆ ಕೇಳಿದಾಗ, ಅವರು ಭಾರತದಲ್ಲಿ ಬಸತನ ಒಂದೇ ಜಾತಿ ಎಂದು ಹೇಳುತ್ತಾರೆ. ಒಂದೇ ಜಾತಿ ಇದ್ದರೆ ನರೇಂದ್ರ ಮೋದಿ OBC ಆಗಿದ್ದು ಹೇಗೆ? ಮುಂದೆ ದೇಶದ ಚುಕ್ಕಾಣಿ ಈ ಹಿಂದಿನಂತೆ ಭಾರತದ ಜನರ ಕೈಯಲ್ಲಿರಬೇಕು ಎಂದು ತಿಳಿಸಿದ್ದಾರೆ.

ಎರಡು ಸಿದ್ಧಾಂತಗಳ ನಡುವೆ ಸಂಘರ್ಷ

ದೇಶದಲ್ಲಿ ನಿರುದ್ಯೋಗ ಕಳೆದ 40 ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ತಮ್ಮ ಪಕ್ಷ ಜಾತಿ ಗಣತಿ ನಡೆಸಲಾಗುವುದು. ದೇಶದಲ್ಲಿ ಎರಡು ಸಿದ್ಧಾಂತಗಳ ನಡುವೆ ಸಂಘರ್ಷವಿದೆ. ನಮ್ಮ ಪಕ್ಷ ಬಿಜೆಪಿಯ ಹಾಗಲ್ಲ. ಕಿರಿಯ ಕಾಂಗ್ರೆಸ್ ಕಾರ್ಯಕರ್ತ ಕೂಡ ಪಕ್ಷದ ಉನ್ನತ ನಾಯಕರನ್ನು ಪ್ರಶ್ನಿಸಬಹುದು ಮತ್ತು ಅವರ ನಿರ್ಣಯಗಳನ್ನು ತಿರಸ್ಕರಿಸಬಹುದು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES