ಬೆಂಗಳೂರು: ಕರವೇ ಹೋರಾಟಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕನ್ನಡವನ್ನು ಉಳಿಸಲಿ, ಬೆಳೆಸಲಿ. ಹೋರಾಟ ಮಾಡುವವರಿಗೆ ಯಾರಿಗೂ ಬೇಡ ಎನ್ನಲ್ಲ. ಆದರೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದ್ದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಬೋರ್ಡ್ ಹಾಕಬೇಡಿ ಎನ್ನಲಿ, ತಪ್ಪು ಅನ್ನಲ್ಲ. ಆದರೆ ಹೆದರಿಸಿ, ಆಸ್ತಿಪಾಸ್ತಿ ಹಾನಿ ಮಾಡಿದರೆ ಯಾರೂ ಒಪ್ಪಲು ಆಗಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ.
ಇದನ್ನೂ ಓದಿ: 500 ರೂ.ಗೆ ಗ್ಯಾಸ್ ಸಿಲಿಂಡರ್: ಸುಳ್ಳು ಸುದ್ದಿ ನಂಬಿ ಕೆವೈಸಿಗೆ ಮುಗಿಬಿದ್ದ ಗ್ರಾಹಕರು!
ಕನ್ನಡ ಫಲಕ ಹಾಕದವರಿಗೆ ನೊಟೀಸ್ ಕೊಡ್ತೇವೆ. ಆಸ್ತಿಗಳನ್ನು ಒಡೆಯೋದು ಮಾಡಬಾರದು. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾರೂ ಮಾಡಬಾರದು. ಸರ್ಕಾರ ಬರಲು ಸಹಕಾರ ಇತ್ತು. ಇಲ್ಲ ಅಂತ ನಾನು ಹೇಳಲ್ಲ. ಹಾಗಂತ ಆಸ್ತಿಪಾಸ್ತಿ ಹಾನಿ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.