ಬೆಂಗಳೂರು : ಕ್ರಿಕೆಟಿಗ ಕೆ.ಸಿ. ಕಾರ್ಯಪ್ಪ ಲವ್ ಸ್ಟೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಾಜಿ ಪ್ರೇಯಸಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.19 ರಂದು I LOVE YOU ಅಂತ ಮೆಸೇಜ್ ಮಾಡಿದ್ದರು. ಡಿ.22 ರಂದು ನನಗೆ ಮೋಸ ಮಾಡಿದ್ರು, ಇದೀಗ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.
ನಾನು ಟಿನೇಜ್ ನಲ್ಲಿದ್ದಾಗ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದೆ. ಅವರು ಮುಸ್ಲಿಂಗೆ ಕನ್ವರ್ಟ್ ಆಗಲು ಹೇಳಿದ್ರು. ಆಗಲ್ಲ ಎಂದು ಮ್ಯೂಚುಯಲ್ ಆಗಿ ಒಪ್ಪಿ ಡಿವೋರ್ಸ್ ಪಡೆದೆವು. ಆ ಬಳಿಕ ಕೆ.ಸಿ. ಕಾರಿಯಪ್ಪ ಪರಿಚಯವಾಗಿದ್ದರು. ನಮ್ಮ ನಡುವೆ ಪ್ರೀತಿ ಬೆಳೆಯಿತು, ನಾನು ಎಲ್ಲವೂ ಹೇಳಿದ್ದೆ ಎಂದು ತಿಳಿಸಿದ್ದಾರೆ.
ಅವಳೇ ನನಗೆ ಮೆಸೇಜ್ ಮಾಡಿದ್ದಳು
ಕೆ.ಸಿ. ಕಾರ್ಯಪ್ಪ ಮಾತನಾಡಿ, ನಾನಿರದಿದ್ದಾಗ ಮನೆಗೆ ಬಂದು ತೊಂದರೆ ಕೊಟ್ಟಿದ್ದಾಳೆ. ನನ್ನ ಕ್ರಿಕೆಟ್ ಕೆರಿಯರ್ಗೆ ತೊಂದರೆ ಕೊಟ್ಟಿದ್ದಾಳೆ. ಮೊದಲು ಅವಳೇ ನನಗೆ ಇನ್ಸ್ಟಾಗ್ರಾಮ್ನಲ್ಲಿ ಮೆಸೇಜ್ ಮಾಡಿದ್ದಳು. ಇವಳಿಗೆ ಮೊದಲು ಮುಸ್ಲಿಂ ಹುಡುಗನ ಜೊತೆ ಮದುವೆ ಆಗಿತ್ತು. ಇವಳಿಗೆ ಮೊದಲು ಮದುವೆ ಆಗಿದ್ದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ತುಂಬಾ ಡ್ರಗ್ ತೆಗೆದುಕೊಳ್ಳುತ್ತಿದ್ದಳು
ಆ ಹುಡುಗಿ ತುಂಬಾ ಡ್ರಗ್ ತೆಗೆದುಕೊಳ್ಳುತ್ತಿದ್ದಳು. ನಾನು ಡ್ರಗ್ಸ್ ಬೇಡ ಎಂದು ಹೇಳಿದ್ದೆ ಆದರು ಬಿಟ್ಟಿರಲಿಲ್ಲ. ಡ್ರಗ್ಸ್ ತೆಗೆದುಕೊಂಡು ನನಗೆ ಟಾರ್ಚರ್ ನೀಡುತ್ತಿದ್ದಳು. ಹೀಗಾಗಿ, ನಾವು ಅವಳ ಮೇಲೆ ದೂರು ನೀಡಿದ್ದೇನೆ ಎಂದು ಕೆ.ಸಿ. ಕಾರಿಯಪ್ಪ ತಿಳಿಸಿದ್ದಾರೆ.