ಬೆಂಗಳೂರು:ವಿಶ್ವಾದ್ಯಂತ ಅದ್ಧೂರಿಯಾಗಿ ಪ್ರಶಾಂತ್ ನೀಲ್-ಪ್ರಭಾಸ್ ಕಾಂಬಿನೇಶನ್‌ನ ‘ಸಲಾರ್’ ತೆರೆ ಕಾಣುತ್ತಿದೆ.
ಕರ್ನಾಟಕದಲ್ಲಿ ಸಲಾರ್ ಕ್ರೇಜ್ ಈಗಾಗಲೇ ಶುರುವಾಗಿದೆ. ಥಿಯೇಟರ್ ಅಂಗಳದಲ್ಲಿ ಸಲಾರ್ ಕಟೌಟ್ಸ್ ರಾರಾಜಿಸುತ್ತಿವೆ. ಪ್ಯಾನ್ ಇಂಡಿಯಾ ಭಾಷೆಯಲ್ಲಿ ಸಲಾರ್ ರಿಲೀಸ್ ಆಗುತ್ತಿವೆ. ಸಲಾರ್ ಕನ್ನಡ ವರ್ಷನ್ ಸಂತೋಷ್ ಥಿಯೇಟರ್‌ನಲ್ಲಿ ಬಿಡುಗಡೆಗೊಳ್ಳುತ್ತಿದೆ.
ಇದನ್ನೂ ಓದಿ: ಮಲ್ಟಿಪ್ಲೆಕ್ಸ್ಗಳಲ್ಲಿ ಸಲಾರ್ ರಿಲೀಸ್ ಡೌಟ್
ಸಲಾರ್ ಸ್ವಾಗತಕ್ಕೆ ಸಿದ್ಧತೆ ಜೋರಾಗಿದ್ದು 54 ಅಡಿಯ ಕಟೌಟ್ ಹಾಕಲಾಗಿದೆ. ಕರ್ನಾಟಕದಲ್ಲಿ 19 ಕಟೌಟ್‌ಗಳು ರಾಜ್ಯಾದಂತ ಥಿಯೇಟರ್ ಮುಂದೇ ಪ್ರೇಕ್ಷಕರನ್ನ ಸೆಳೆಯಲಿವೆ. ಕೆಜಿಎಫ್ 2 ಗಿಂತಲೂ ಅತ್ಯಧಿಕ ಸ್ಕ್ರೀನ್‌ಗಳಲ್ಲಿ ಸಲಾರ್ ರಿಲೀಸ್ ಆಗುತ್ತಿದೆ.
Experience the epic action saga, #SalaarCeaseFire at your nearest cinemas from TODAY 🔥#Salaar #Prabhas #PrashanthNeel @PrithviOfficial @shrutihaasan @VKiragandur @hombalefilms @IamJagguBhai @sriyareddy @bhuvangowda84 @RaviBasrur @vchalapathi_art @anbariv @SalaarTheSaga pic.twitter.com/44gzrsgv3k
— Hombale Films (@hombalefilms) December 21, 2023
ಕೆಜಿಎಫ್ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್ ನ ವಿಜಯ್ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.