Monday, December 23, 2024

ಮಲ್ಟಿಪ್ಲೆಕ್ಸ್​ಗಳಲ್ಲಿ ಸಲಾರ್​ ರಿಲೀಸ್​ ಡೌಟ್​!

ಬೆಂಗಳೂರು: ಪಿವಿಆರ್​, ಐನಾಕ್ಸ್​ ಹಾಗೂ ಮಿರಾಜ್​ ಮಲ್ಟಿಪ್ಲೆಕ್ಸ್​ಗಳ ಮೇಲೆ ಹೆಸರಾಂತ ಹೊಂಬಾಳೆ ಫಿಲಿಂಸ್​ ಆಕ್ರೋಶ ಹೊರ ಹಾಕಿದೆ.

ಇದೇ ಡಿ. 21 ರಂದು ಬಾಲಿವುಡ್​ ಸ್ಟಾರ್ ಶಾರುಕ್​ ಖಾನ್​ ನಟನೆಯ ಡಂಕಿ ಮತ್ತು ಡಿ.22 ರಂದು ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ನಟನೆಯ ಸಿನಿಮಾಗಳ ಸ್ಕ್ರೀನ್​ ಗಳ ಹಂಚಿಕೆ ವಿಚಾರದಲ್ಲಿ ತಾರತಮ್ಯ ತೋರುತ್ತಿರುವ ಹಿನ್ನೆಲೆ ಮಲ್ಟಿಪ್ಲೆಕ್ಸ್​ಗಳ ಮೇಲೆ ಹೊಂಬಾಳೆ ಫಿಲಿಂಸ್​​ ಆಕ್ರೋಶ ಹೊರಹಾಕಿದ್ದು ಸಿನಿಮಾ ಡೀಲ್​ ಗಳನ್ನು ಹಿಂಪಡೆಯಲು ಹೊಂಬಾಳೆ ನಿರ್ಧರಿಸಿದೆ.

ಇದನ್ನೂ ಓದಿ: Mobile Phone SwitchOff: ಇಂದು ರಾತ್ರಿ 8ಗಂಟೆಗೆ ಮೊಬೈಲ್ ಫೋನ್​ ಸ್ವಿಚ್​ ಆಫ್​!

ಡಂಕಿ ಚಿತ್ರಕ್ಕೆ ಬಹುತೇಕ ಸ್ಕ್ರೀನ್​ ನೀಡಿರೋ ಮಲ್ಟಿಪ್ಲೆಕ್ಸ್​ ಗಳು ಸಲಾರ್​ ಗೆ ಕಡಿಮೆ ಸ್ಕ್ರೀನ್ಸ್​ ಗಳನ್ನು ನೀಡಿದೆ. ಇದಕ್ಕೂ ಮುನ್ನ ಡಂಡಿ – ಸಲಾರ್​ ಸಿನಿಮಾಗಳಿಗೆ 50-50 ಸ್ಕ್ರೀನ್ ಗಳನ್ನು ನೀಡುವುದಾಗಿ ಮಾತುಕೊಟ್ಟಿದ್ದ ಮಲ್ಟಿಪ್ಲೆಕ್ಸ್​ ಮಾಲೀಕರಾದ ಅಜಯ್​ ಬಿಜಲಿ ಶಾರುಕ್ ಖಾನ್​ ಭೇಟಿಯ ಬಳಿಕ ಮಾತು ಬದಲಿಸಿದ್ದಾರೆ.

ಸಲಾರ್ ಗೆ ಮಲ್ಟಿಪ್ಲೆಕ್ಸ್ ಗಳಲ್ಲಿ  (50-50) ಡಂಕಿಗೆ ನೀಡಿರುವಷ್ಟೇ ಸ್ಕ್ರೀನ್ಸ್ ನ ನೀಡಬೇಕು ಇಲ್ಲದಿದ್ದರೆ ಪಿವಿಆರ್ ಹಾಗೂ ಐನಾಕ್ಸ್ ನಲ್ಲಿ ಸಲಾರ್ ಸಿನಿಮಾ ರಿಲೀಸ್ ಮಾಡಲ್ಲ ಎಂದು ಪವರ್ ಟಿವಿಗೆ ಕನ್ನಡದ ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಿಂಸ್​ ಮಾಲೀಕ ವಿಜಯ್ ಕಿರಗಂದೂರು ಅವರು ಸಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES