Friday, May 3, 2024

ಅಬ್ಬಬ್ಬಾ..! 1 ಎಸೆತಕ್ಕೆ 7 ಲಕ್ಷ, ಪ್ರತಿ ಓವರ್​ಗೆ 44 ಲಕ್ಷ, ಒಂದು ಪಂದ್ಯಕ್ಕೆ 1.76 ಕೋಟಿ

ಬೆಂಗಳೂರು : ಆಸ್ಟ್ರೇಲಿಯಾ ಬೌಲರ್ ಮಿಚೆಲ್ ಸ್ಟಾರ್ಕ್ ಐಪಿಎಲ್​ (IPL-2024) ಮಿನಿ ಹರಾಜಿನಲ್ಲಿ ಜಾಕ್​ಪಾಟ್ ಹೊಡೆದಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಫ್ರಾಂಚೈಸಿ ಸ್ಟಾರ್ಕ್​ ಅವರನ್ನು ಬರೋಬ್ಬರಿ 24.75 ಕೋಟಿ ಕೊಟ್ಟು ಖರೀದಿಸಿದೆ. ಈ ಮೂಲಕ ಸ್ಟಾರ್ಕ್​ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ.

ವಿಶೇಷ ಅಂದ್ರೆ ಐಪಿಎಲ್​ ಟೂರ್ನಿಯಲ್ಲಿ ಪ್ರತಿ ತಂಡ 14 ಪಂದ್ಯಗಳನ್ನು ಆಡಬೇಕಿದೆ. ಆ ಲೆಕ್ಕಾಚಾರದ ಪ್ರಕಾರ ಮಿಚೆಲ್ ಸ್ಟಾರ್ಕ್ ಪ್ರತಿ ಪಂದ್ಯಕ್ಕೆ 1.76 ಕೋಟಿ ಪಡೆಯುತ್ತಾರೆ. ಸ್ಟಾರ್ಕ್​ ಒಂದು ಪಂದ್ಯದಲ್ಲಿ 4 ಓವರ್ ಮಾತ್ರ ಬೌಲ್​ ಮಾಡಬೇಕಾಗಿರುತ್ತದೆ. ಪ್ರತಿ ಓವರ್ ಬೌಲ್ ಮಾಡಲು 44.19 ಲಕ್ಷ ರೂ. ಸಿಗುತ್ತದೆ. ಅಂದರೆ ಸ್ಟಾರ್ಕ್​ ಒಂದು ಬಾಲ್ ಎಸೆಯಲು ಸುಮಾರು 7.36 ಲಕ್ಷ ರೂಪಾಯಿ ಜೇಬಿಗೆ ಇಳಿಸುತ್ತಾರೆ.

ಸ್ಟಾರ್ಕ್​ಗಾಗಿ ಭಾರಿ ಪೈಪೋಟಿ

ಮಿಚೆಲ್ ಸ್ಟಾರ್ಕ್​ 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಈ ಮಾರಕ ವೇಗಿಯನ್ನು ಖರೀದಿಗೆ ಡೆಲ್ಲಿ, ಮುಂಬೈ, ಕೆಕೆಆರ್ ಹಾಗೂ ಗುಜರಾತ್ ಮಧ್ಯೆ ಭರ್ಜರಿ ಫೈಟ್ ನಡೆಯಿತು. ಅಂತಿಮವಾಗಿ ಕೆಕೆಆರ್ ತಂಡ ಬರೋಬ್ಬರಿ 24.75 ಕೋಟಿ ನೀಡಿ ಖರೀದಿಸಿತು. ಸದ್ಯ ಐಪಿಎಲ್​ ಹರಾಜಿನಲ್ಲಿ ಬಿಕರಿಯಾದ ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್​ 20.50 ಕೋಟಿ ಬಿಕರಿಯಾದರು. ಈ ಹಿಂದೆ ಸ್ಯಾಮ್ ಕರ್ರನ್ 18.50 ಕೋಟಿ, ಕ್ಯಾಮರೂನ್ ಗ್ರೀನ್ 17.50 ಕೋಟಿಗೆ ಬಿಕರಿಯಾಗಿದ್ದರು.

RELATED ARTICLES

Related Articles

TRENDING ARTICLES