Friday, May 3, 2024

ಧೋನಿ ತಂಡ ಸೇರಿದ ‘ಕನ್ನಡಿಗ’ : ಚೈನ್ನೈ ಟೀಂನಲ್ಲಿ ‘ಕಿವೀಸ್’ ಪ್ರಾಬಲ್ಯ

ಬೆಂಗಳೂರು : ಬೆಂಗಳೂರು ಮೂಲದ ನ್ಯೂಜಿಲೆಂಡ್ ಸ್ಟಾರ್ ಆಲ್​ರೌಂಡರ್ ರಚಿನ್ ರವಿಂದ್ರ ಅವರು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ಪಾಲಾಗಿದ್ದಾರೆ.

ದುಬೈನ ಕೋಕಾ ಕೋಲಾ ಅರೆನಾದಲ್ಲಿ ಈ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಚೆನ್ನೈ ತಂಡ ಅಳೆದು ತೂಗಿ ಆಟಗಾರರನ್ನು ಖರೀದಿಸಿದೆ. ವಿಶೇಷವೆಂದರೆ ನ್ಯೂಜಿಲೆಂಡ್ ತಂಡದ ಸ್ಟಾರ್​ ಆಟಗಾರರನ್ನೇ ತಂಡಕ್ಕೆ ಸೇರಿಸಿಕೊಂಡಿದೆ.

50 ಲಕ್ಷ ರೂ. ಮೂಲ ಬೆಲೆಯೊಂದಿಗೆ ರಚಿನ್ ರವೀಂದ್ರ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ರಚಿನ್ ಖರೀದಿಗೆ ಚೆನ್ನೈ ಸೂಪರ್​ ಕಿಂಗ್ಸ್​, ಪಂಜಾಬ್ ಕಿಂಗ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ನಡುವೆ ಪೈಪೋಟಿ ನಡೆಯಿತು. ಅಂತಿಮವಾಗಿ 1.80 ಕೋಟಿ ರೂ.ಗೆ ರಚಿನ್ ಅವರನ್ನು ತಮ್ಮ ತೆಕ್ಕೆಗೆ ಹಕಿಕೊಳ್ಳುವಲ್ಲಿ ಚೆನ್ನೈ (ಸಿಎಸ್​ಕೆ) ಯಶಸ್ವಿಯಾಯಿತು.

14 ಕೊಟಿ ರೂ.ಗೆ ಮಿಚೆಲ್ ಸೇಲ್

ಮತ್ತೊಬ್ಬ ಕಿವೀಸ್ ಸ್ಟಾರ್ ಪ್ಲೇಯರ್ ಡ್ಯಾರಿಲ್ ಮಿಚೆಲ್ ಭರ್ಜರಿ ಬೆಲೆಗೆ ಮಾರಾಟವಾಗಿದ್ದಾರೆ. 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಮಿಚೆಲ್ ಹರಾಜಿನಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಮಿಚೆಲ್ ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್​ ಬರೋಬ್ಬರಿ 14 ಕೋಟಿ ರೂ.ಗೆ ಖರೀದಿಸಿತು.

ಚೈನ್ನೈ ತಂಡದಲ್ಲಿ ‘ಕಿವೀಸ್’ ಪ್ರಾಬಲ್ಯ

ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಈ ಬಾರಿ ಕಿವೀಸ್ ಆಟಗಾರರೇ ಪ್ರಾಬಲ್ಯ ಸಾಧಿಸಿದ್ದಾರೆ. ನ್ಯೂಜಿಲೆಂಡ್​ನ ಸ್ಟೀಫನ್ ಫ್ಲೆಮಿಂಗ್ ಸಿಎಸ್​ಕೆ ತಂಡದ ಮುಖ್ಯ ಕೋಚ್​ ಆಗಿದ್ದಾರೆ. ಇನ್ನೂ ಕಿವೀಸ್ ಕ್ಲಾಸ್ ಬ್ಯಾಟರ್ ಡೆವೊನ್ ಕಾನ್ವೆ ಅವರು ಕಳೆದ ಸೀಸನ್​ಲ್ಲಿ ಚೆನ್ನೈ ಪರ ಆರಂಭಿಕರಾಗಿ ಅಬ್ಬರಿಸಿದ್ದರು. ಕಿವೀಸ್ ಆಲ್​ರೌಂಡರ್ ಮಿಚೆಲ್ ಸ್ಯಾಂಟ್ನರ್ ಕೂಡ ಧೋನಿ ಬಳಗದಲ್ಲಿದ್ದಾರೆ. ಇದೀಗ ಮತ್ತೊಬ್ಬ ಆಲ್​ರೌಂಡರ್ ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್ ಕೂಡ ಚೆನ್ನೈ ಬಳಗ ಸೇರಿದ್ದಾರೆ.

RELATED ARTICLES

Related Articles

TRENDING ARTICLES