Monday, December 23, 2024

ಮಿಮಿಕ್ರಿ ಮಾಡಿ ಉಪರಾಷ್ಟ್ರಪತಿಗೆ ಅವಮಾನ : ಮೊಬೈಲ್​ನಲ್ಲಿ ವೀಡಿಯೋ ಚಿತ್ರೀಕರಿಸಿ ಖುಷಿಪಟ್ಟ ರಾಹುಲ್ ಗಾಂಧಿ

ನವದೆಹಲಿ : ಸಂಸದರ ಅಮಾನತು ಖಂಡಿಸಿ ಸಂಸತ್ ಭವನದ ಮುಂದೆ ಪ್ರತಿಭಟನೆ ಮಾಡುವಾಗ ಟಿಎಂಸಿ ಸಂಸದ ಮಿಮಿಕ್ರಿ ಮಾಡುವ ಮೂಲಕ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನಕರ್ ಅವರಿಗೆ ಅವಮಾನಿಸಿರುವ ಘಟನೆ ನಡೆದಿದೆ.

ಟಿಎಂಸಿ ಎಂಪಿ ಕಲ್ಯಾಣ ಬ್ಯಾನರ್ಜಿ ಅವರೇ ಈ ರೀತಿ ವ್ಯಂಗ್ಯವಾಗಿ ಮಿಮಿಕ್ ಮಾಡಿರುವ ಸಂಸದ. ವಿಪರ್ಯಾಸವೆಂದರೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು, ಇವರ ಈ ಮಿಮಿಕ್ರಿಯನ್ನು ತಮ್ಮ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿ ಖುಷಿಪಟ್ಟಿದ್ದಾರೆ.

ಇಷ್ಟೇ ಅಲ್ಲದೆ ಪ್ರತಿಭಟನಾ ನಿರತ ಎಲ್ಲಾ ಸಂಸದರು ಈ ವೇಳೆ ಕಲ್ಯಾಣ ಬ್ಯಾನರ್ಜಿ ಅವರು ಮಾಡಿದ ಮಿಮಿಕ್ರಿಗೆ ಬಿದ್ದು ಬಿದ್ದು ನಕ್ಕಿದ್ದಾರೆ. ವಿರೋಧ ಪಕ್ಷಗಳ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯಸಭಾ ಅಧ್ಯಕ್ಷರಾಗಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಕೂಡ ಸಂಸದರ ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ನಾಚಿಕೆಗೇಡಿನ ವರ್ತನೆ ಮತ್ತು ಇಂತಹ ವರ್ತನೆ ಎಂದಿಗೂ ಸ್ವೀಕಾರಾರ್ಹವಲ್ಲ ಎಂದು ಕಿಡಿಕಾರಿದ್ದಾರೆ.

ರಾಹುಲ್​ ವಿರುದ್ಧ ಬಿಜೆಪಿ ಕಿಡಿ

ಸಂಸದ ಕಲ್ಯಾಣ ಬ್ಯಾನರ್ಜಿ ವರ್ತನೆಗೆ ಬಿಜೆಪಿ ಕಿಡಿಕಾರಿದೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇಡೀ ದೇಶವೇ ಏಕೆ ವಿರೋಧ ಪಕ್ಷದ ಸಂಸದರು ಅಮಾನತ್ತಾಗಿದ್ದಾರೆ ಎಂದು ಅಚ್ಚರಿಗೆ ಒಳಗಾಗಿದೆ. ಅದಕ್ಕೆ ಕಾರಣ ಇಲ್ಲಿದೆ ಎಂದು ಕುಟುಕಿದೆ.

ಸಂಸದ ಕಲ್ಯಾಣ ಬ್ಯಾನರ್ಜಿ ಉಪರಾಷ್ಟ್ರಪತಿ ಅವರನ್ನು ವ್ಯಂಗ್ಯವಾಡಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಅವರನ್ನು ಮತ್ತೊಮ್ಮೆ ಹಾಗೆಯೇ ಮಾಡುವಂತೆ ಹುರಿದುಂಬಿಸಿದ್ದಾರೆ. ಇದು ಅವರು ಸದನದಲ್ಲಿ ಎಷ್ಟು ಅಜಾಗರೂಕವಾಗಿ ವರ್ತಿಸಿ ಸದನದ ನಿಯಮ ಉಲ್ಲಂಘಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ರಾಹುಲ್ ಗಾಂಧಿ ವಿರುದ್ಧವೂ ಹರಿಹಾಯ್ದಿದೆ.

RELATED ARTICLES

Related Articles

TRENDING ARTICLES