Wednesday, December 18, 2024

ರಾಹುಲ್ ಗಾಂಧಿ ತುಮಕೂರಿನಿಂದ ಸ್ಪರ್ಧೆ ಮಾಡಿದ್ರೆ ಬೇಡ ಅಂತೀವಾ? : ಪರಮೇಶ್ವರ್

ತುಮಕೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧೆ ವಿಚಾರವಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ. ರಾಹುಲ್ ಗಾಂಧಿ ಇಡೀ ದೇಶದಲ್ಲಿ ರಿಸರ್ವ್ (ಮೀಸಲು) ಕ್ಷೇತ್ರಗಳನ್ನ ಬಿಟ್ಟು ಎಲ್ಲಿ ಬೇಕಾದರು ನಿಲ್ಲಬಹುದು ಎಂದು ಹೇಳಿದ್ದಾರೆ.

ನಾನು ರಾಹುಲ್ ಗಾಂಧಿ ಅವರನ್ನು ಆಹ್ವಾನ ಮಾಡೋದೆ ಬೇಕಾಗಿಲ್ಲ. ಸ್ಪರ್ಧೆ ಮಾಡೋದಿದ್ರೆ ಅವರೇ ತುಮಕೂರಿಗೆ ಬರ್ತಾರೆ. ನಮ್ಮನ್ನ ಹೇಳಿ ಕೇಳಿ ಬರ್ತಾರಾ ಇಲ್ಲಿ. ರಾಹುಲ್ ಗಾಂಧಿ ಬರ್ತಾರೆ ಅಂದ್ರೆ ನಾವ್ಯಾರು ಬೇಡ ಅಂತೀವಾ? ಟಿ.ಬಿ ಜಯಚಂದ್ರ ಅವರು ದೆಹಲಿ ಪ್ರತಿನಿಧಿ. ಅವರಿಗೆ ಮಾಹಿತಿ ಇರಬಹುದು. ನಮಗೆ ಯಾವತ್ತೂ ಸಹಮತ ಇದ್ದೆ ಇರುತ್ತೆ ಎಂದು ತಿಳಿಸಿದ್ದಾರೆ.

ಯಾರು ಕರೆದರು ಹೋಗ್ತಿನಿ, ತಪ್ಪೇನು?

ಅಹಿಂದ ಸಮಾವೇಶ ಕಾರ್ಯಕ್ರಮ ವಿಚಾರ ಕುರಿತು ಮಾತನಾಡಿದ ಅವರು, ಅದರ ಬಗ್ಗೆ ನನಗೇನು ಗೊತ್ತಿಲ್ಲ. ಸಮಾವೇಶ ಮಾಡ್ತಾರೆ ಅಂತ ಕೇಳಿದ್ದೆ ಬಿಟ್ರೆ, ಅದರ ಉದ್ದೇಶ ಏನು ಅಂತ ನನಗೆ ಗೊತ್ತಿಲ್ಲ. ನಾನು ರಾಜ್ಯ ಸರ್ಕಾರದ ಒಬ್ಬ ಪ್ರತಿನಿಧಿ. ಯಾರು ಕರೆದರು ಹೋಗ್ತಿನಿ, ಅದರಲ್ಲಿ ತಪ್ಪೆನಿಲ್ಲ ಎಂದು ಹೇಳಿದ್ದಾರೆ.

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನ ಮಾತಿಗೆ ಯಾವ ಪ್ರತಿಕ್ರಿಯೆ ಕೊಡೋಕೆ ಇಷ್ಟಪಡಲ್ಲ ನಾನು ಎಂದು ಪರಮೇಶ್ವರ್ ಹಿಂದೇಟು ಹಾಕಿದ್ದಾರೆ.

RELATED ARTICLES

Related Articles

TRENDING ARTICLES