Monday, December 23, 2024

ಶ್ರೀಮುರಳಿ ಹುಟ್ಟು ಹಬ್ಬಕ್ಕೆ ‘ಪರಾಕ್’ ಟೈಟಲ್ ಪೋಸ್ಟರ್ ರಿಲೀಸ್

ಬೆಂಗಳೂರು : ಶ್ರೀಮುರಳಿ ಹುಟ್ಟುಹಬ್ಬದ ಪ್ರಯುಕ್ತ ಅವರ ನಟನೆಯ ‘ಬಘೀರ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಇದೇ ದಿನ ಅವರ ನಟನೆಯ ಹೊಸ ಚಿತ್ರ ಘೋಷಣೆಯಾಗಿದ್ದು, ‘ಪರಾಕ್’ನ ಟೈಟಲ್ ಪೋಸ್ಟರ್ ರಿಲಿಸ್ ಆಗಿದೆ.

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬರ್ತ್​ ಡೇ ಜನ್ಮದಿನ ದಿನವೇ ಭರ್ಜರಿ ಗಿಫ್ಟ್​ ಸಿಕ್ಕಿವೆ.

ಯುವ ಪ್ರತಿಭೆಗಳ ಜೊತೆ ನಟ ಶ್ರೀಮುರಳಿ ಕೈ ಜೋಡಿಸಿದ್ದಾರೆ. ರೋರಿಂಗ್ ಸ್ಟಾರ್ ಜನ್ಮೋತ್ಸವದ ಸ್ಪೆಷಲ್ ಆಗಿ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನಿರ್ದೇಶಕ ಹಾಲೇಶ್ ಕೋಗುಂಡಿ ಸಾರಥ್ಯದ ಚಿತ್ರಕ್ಕೆ ಪರಾಕ್ ಎಂಬ ಟೈಟಲ್ ಇಡಲಾಗಿದೆ.

ಹಾಲೇಶ್ ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವ ಹೊಂದಿದ್ದಾರೆ. ಇದೀಗ, ಪರಾಕ್ ಚಿತ್ರದ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಚಿತ್ರಕ್ಕಾಗಿ ಮಂಜುನಾಥ್ ಬರವಣಿಗೆಯಲ್ಲಿ ಸಾಥ್ ಕೊಟ್ಟಿದ್ದು, ಬ್ರ್ಯಾಂಡ್ ಕೋ ಆಪರೇಟ್ಸ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ನಡಿ ನಿರ್ಮಾಣ ಮಾಡಲಾಗುತ್ತಿದೆ. ಕೋಗುಂಡಿ ಅಖಿಲೇಶ್ ಹಾಗೂ ಆಶಿಕ್ ಮಾಡಾಲ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಬಹುತೇಕ ದಾವಣಗೆರೆ ಪ್ರತಿಭೆಗಳೇ ಒಂದಾಗಿ ಪರಾಕ್ ಚಿತ್ರ ಮಾಡುತ್ತಿದ್ದಾರೆ. ಹೊಸ ಅವತಾರದಲ್ಲಿ ನಟ ಶ್ರೀಮುರಳಿ ದರ್ಶನ ಕೊಟ್ಟಿದ್ದಾರೆ. ಚಿತ್ರತಂಡ ಮೇ ಅಥವಾ ಜೂನ್ ತಿಂಗಳಿನಿಂದ ಶೂಟಿಂಗ್ ಆರಂಭಿಸುವ ಯೋಜನೆ ಹಾಕಿಕೊಂಡಿದೆ.

RELATED ARTICLES

Related Articles

TRENDING ARTICLES