Wednesday, January 22, 2025

ಕೆಲವರು ಟಿಪ್ಪುಗೆ ಹುಟ್ಟಿದವರ ರೀತಿ ಕಾಣುತ್ತಿದೆ : ಈಶ್ವರಪ್ಪ ಕಿಡಿ

ಶಿವಮೊಗ್ಗ : ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಬೇಕು ಎಂಬ ವಿಚಾರ ಕುರಿತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇನ್ನೂ ಕೆಲವರು ಟಿಪ್ಪು ಸುಲ್ತಾನ್​ಗೆ ಹುಟ್ಟಿದವರ ರೀತಿಯಲ್ಲಿ ಕಾಣುತ್ತಿದೆ. ಅವರೆಲ್ಲ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು. ಇಂದಲ್ಲ ನಾಳೆ ಇವರಿಗೆ ಗೊತ್ತಾಗಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಂಸದ ಪ್ರತಾಪ್ ಸಿಂಹ ಪಾಸ್ ಕೊಟ್ಟ ವಿಚಾರವಾಗಿ ಮಾತನಾಡಿ, ಒಳ್ಳೆಯವರು ಎಂದು ನಂಬಿಕೊಂಡು ಪಾಸ್ ಎಲ್ಲರೂ ಕೊಡ್ತಾರೆ. ಪ್ರತಾಪ್ ಸಿಂಹ ರಾಷ್ಟ್ರದ್ರೋಹಿನಾ? ಪ್ರತಾಪ್ ಸಿಂಹರಂತಹ ರಾಷ್ಟ್ರಭಕ್ತ ಬೇಕಾ? ಎಲ್ಲದರಲ್ಲೂ ರಾಜಕಾರಣ ಮಾಡಬಾರದು ಎಂದು ಪ್ರತಾಪ್ ಸಿಂಹ ಪರ ಬ್ಯಾಟ್ ಬೀಸಿದ್ದಾರೆ.

ಜಮೀರ್ ಅಹ್ಮದ್ ತರ ಜಿನ್ನಾ ರಕ್ತ ಅಲ್ಲ

ಈಶ್ವರಪ್ಪ ನನ್ನನ್ನು ಭೇಟಿ ಮಾಡುವುದು ಬೇಡ ಎಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವಾಗ ಶೆಟ್ಟರ್ ಹತ್ತಿರ ಹೋಗ್ತೇನೆ‌ ಅಂದಿದ್ದೆ? ಶೆಟ್ಟರ್ ಹಾಗೂ ಶೆಟ್ಟರ್ ಅಪ್ಪನ ಮೈಯಲ್ಲಿ ಹರಿಯುತ್ತಿರೋದು ಹಿಂದೂತ್ವದ ರಕ್ತ. ಜಮೀರ್ ಅಹ್ಮದ್ ತರ ಜಿನ್ನಾ ರಕ್ತ ಅಲ್ಲ. ಶೆಟ್ಟರ್ ಮೈಯಲ್ಲಿ ಇರೋದು ಹಿಂದುತ್ವ ರಕ್ತ. ಇಲ್ಲಿಯವರೆಗೆ ಅವರ ಮುಖ‌ ಸಹ ನೋಡಿಲ್ಲ ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ನಲ್ಲಿ ಅನೇಕ ರಾಷ್ಟ್ರದ್ರೋಹಿಗಳಿದ್ದಾರೆ

ಶೆಟ್ಟರ್ ಅವರೇ, ನಿಮಗೆ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಮಾಡ್ತಾರಾ ನೋಡೋಣ. ಸ್ವಾರ್ಥಿಗಳಿರುವ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ನಲ್ಲಿ ಅನೇಕ ರಾಷ್ಟ್ರದ್ರೋಹಿಗಳಿದ್ದಾರೆ. ಎಲ್ಲರೂ ರಾಷ್ಟ್ರದ್ರೋಹಿಗಳಲ್ಲ. ಜಗದೀಶ್ ಶೆಟ್ಟರ್ ಅವರನ್ನ ಲೆಕ್ಕದಲ್ಲೇ ಇಟ್ಟುಕೊಂಡಿಲ್ಲ ನಾನು ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES