Sunday, May 19, 2024

6 ಲಕ್ಷ ರೂ.ಮೌಲ್ಯದ ಬೆಳ್ಳುಳ್ಳಿ ಕಳವು

ಚಿತ್ರದುರ್ಗ: ಈರುಳ್ಳಿ ಬೆಲೆ ಕೆಜಿಗೆ 100 ರೂ. ದಾಟಿದಾಗ ಪೊಲೀಸ್‌ ಭದ್ರತೆ’ಯಲ್ಲಿ ಸಾಗಾಟ ಮಾಡಿದ್ದು, ಟೊಮೆಟೋ ದರ 200ರೂ. ದಾಟಿದಾಗ ಅದನ್ನು ಹೊತ್ತೂಯ್ಯುತ್ತಿದ್ದ ಲಾರಿಯನ್ನೇ ಅಪಹರಣ ಮಾಡಿದ್ದಂತಹ ಘಟನೆಗಳು ಎಲ್ಲರಿಗೂ ನೆನಪಿರಬಹುದು. ಈಗ ಬೆಳ್ಳುಳ್ಳಿಯ ಸರದಿ. 

ಹೌದು,ದಂಡಿನಕುರುಬರಹಟ್ಟಿಯ ಗೋದಾಮಿನಲ್ಲಿ ಉದ್ಯಮಿಯೊಬ್ಬರು ಸಂಗ್ರಹಿಸಿಟ್ಟಿದ್ದ 26 ಲಕ್ಷ ಮೌಲ್ಯದ 150 ಚೀಲ ಬೆಳ್ಳುಳ್ಳಿ ಕಳುವಾಗಿದೆ. ರಾಜಲಕ್ಷ್ಮಿ ಕಂಪನಿಯ ಜಿ.ಎಂ.ಬಸವಕಿರಣ್ ಎಂಬುವರಿಗೆ ಸೇರಿದ ಬೆಳ್ಳುಳ್ಳಿ ಕಳುವಾಗಿವೆ.

ಗೋದಾಮಿನ ಷಟರ್ ಮುರಿದು ಕೃತ್ಯ ಎಸಗಲಾಗಿದೆ. ಬೆಳ್ಳುಳ್ಳಿ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ರಃ ಕಳವು ನಡೆದಿದೆ ಎಂದು ಪೊಲೀಸರು ಉದ್ಯಮಿ ಬಸವಕಿರಣ್ ಅವರು 50 ಕೆ.ಜಿ. ತೂಕದ 1.100 ಚೀಲ ಬೆಳ್ಳುಳ್ಳಿಯನ್ನು ಮಧ್ಯಪ್ರದೇಶದಲ್ಲಿ ಖರೀದಿಸಿ ಚಿತ್ರದುರ್ಗಕ್ಕೆ ತಂದಿದ್ದರು.

ಇದನ್ನೂ ಓದಿ: ಪಾರ್ಲಿಮೆಂಟ್​ ಒಳಗೆ ನುಗ್ಗಿದ ಅಪರಿಚಿತರು!

ದಂಡಿನಕುರುಬರಹಟ್ಟಿಯ ಜಯಶೀಲರೆಡ್ಡಿ ಎಂಬುವರ ಗೋದಾಮಿನಲ್ಲಿ ಐದು ತಿಂಗಳಿಂದ ಸಂಗ್ರಹಿಸಿಟ್ಟಿದ್ದರು. ಗೋದಾಮಿಗೆ ಭೇಟಿ ನೀಡಿದಾಗ ಪಟರ್ ಮುರಿದಿದ್ದು ಗೊತ್ತಾಗಿದೆ. ಚೀಲಗಳನ್ನು ಪರಿಶೀಲಿಸಿ ದೂರು ನೀಡಿದ್ದಾರೆ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

Chitradurga Theft Garlic

 

RELATED ARTICLES

Related Articles

TRENDING ARTICLES