Sunday, May 12, 2024

ರಿಂಕು ಸಿಂಗ್ ಸಿಡಿಸಿದ ಸಿಕ್ಸರ್​ಗೆ ಕ್ರಿಡಾಂಗಣದ ಗಾಜು ಪುಡಿಪುಡಿ..!

ಬೆಂಗಳೂರು : ಹರಿಣಗಳ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ರಿಂಕು ಸಿಂಗ್ ಬೆಂಕಿ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.

ಅದರಲ್ಲೂ ರಿಂಕು ಸಿಂಗ್ ಸಿಡಿಸಿದ ಸಿಕ್ಸರ್‌ ಕ್ರಿಡಾಂಗಣದ ಮೀಡಿಯಾ ಬಾಕ್ಸ್‌ನ ಗಾಜು ಪುಡಿಪುಡಿ ಆಯಿತು. ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಮ್ ಎಸೆತದಲ್ಲಿ ರಿಂಕು ಸಿಂಗ್ ಸಿಡಿಸಿದ ಭರ್ಜರಿ ಸಿಕ್ಸರ್ ಮೀಡಿಯಾ ಬಾಕ್ಸ್​ಗೆ ಬಡಿಯಿತು. ಇರದಿಂದ ಅದರ ಗಾಜು ಒಡೆದು ಹೋಯಿತು.

ಇನ್ನೂ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಡಿ-20 ಪಂದ್ಯಕ್ಕೂ ನಳೆ ಅಡ್ಡಿಯಾಯಿತು. 19.3 ಓವರ್​ಗಳಲ್ಲಿ ಭಾರತ 7 ವಿಕೆಟ್ ಕಳೆದುಕೊಂಡು 180 ರನ್​ ಗಳಿಸಿದ್ದಾಗ ಗೆಬರ್ಹಾದಲ್ಲಿರುವ ಸೇಂಟ್ ಜಾರ್ಜ್ ಪಾರ್ಕ್​ನಲ್ಲಿ ಜೋರು ಮಳೆಸುರಿಯತೊಡಗಿತು. ಹೀಗಾಗಿ, ಅಂಪೈರ್​ಗಳು ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ಭಾರತಕ್ಕೆ ರಿಂಕು, ಸೂರ್ಯ ಆಸರೆ

ಆರಂಭಿಕ ಆಘಾತ ಕಂಡಿದ್ದ ಭಾರತಕ್ಕೆ ಆಸರೆಯಾಗಿದ್ದು ನಾಯಕ ಸೂರ್ಯಕುಮಾರ್ ಯಾದವ್ (56) ಹಾಗೂ ಗ್ರೇಟ್ ಫಿನಿಷರ್ ರಿಂಕು ಸಿಂಗ್ (68*) ಅವರ ಭರ್ಜರಿ ಆಟ. ಇವರಿಬ್ಬರ ಬೊಂಬಾಟ್ ಆಟದಿಂದ ಭಾರತ ತಂಡದ ಮೊತ್ತ 150 ರನ್​ಗಳ ಗಡಿ ದಾಡಿತು. ಮಳೆಯಿಂದಾಗಿ ಅಂಪೈರ್​ಗಳು ಪಂದ್ಯವನ್ನು 15 ಓವರ್​ಗಳಿಗೆ ಮೊಟಕುಗೊಳಿಸಿದರು. ದಕ್ಷಿಣ ಆಫ್ರಿಕಾ ಗೆಲುವಿಗೆ 15 ಓವರ್​ಗಳಲ್ಲಿ 152 ರನ್​ಗಳ ಅಗತ್ಯವಿದೆ.

RELATED ARTICLES

Related Articles

TRENDING ARTICLES