Friday, May 3, 2024

ಹಂಪಿಯನ್ನು ಬಳ್ಳಾರಿಗೆ ಸೇರಿಸಬೇಕು, ಬಳ್ಳಾರಿಗೆ ವಿಜಯನಗರ ಅಂತ ಹೆಸರಿಡಬೇಕು : ಜನಾರ್ದನ ರೆಡ್ಡಿ

ವಿಧಾನಸಭೆ : ಬಳ್ಳಾರಿ ವಿಭಜನೆ ಹಾಗೂ ವಿಜಯನಗರ ಜಿಲ್ಲೆ ರಚನೆ ಬಗ್ಗೆ ನನಗೆ ದು:ಖ ಇದೆ ಎಂದು ಶಾಸಕ ಜನಾರ್ದನ ರೆಡ್ಡಿ ಬೇಸರಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಹೊಸಪೇಟೆಯನ್ನು ಹೆಡ್ ಕ್ವಾರ್ಟರ್ ಮಾಡಿ ವಿಜಯನಗರ ಜಿಲ್ಲೆ ಮಾಡಿರೋದಕ್ಕೆ ವೈಯಕ್ತಿಕವಾಗಿ ನನ್ನ ದು:ಖ ಇದೆ. ಈ ನೋವು ಬಹಳ ಜನರಿಗೆ ಇದೆ ಎಂದರು.

ಬಳ್ಳಾರಿ ಜಿಲ್ಲೆಗೆ ವಿಜಯನಗರ ಅಂತ ಹೆಸರಿಡಬೇಕು. ವಿಜಯನಗರ ಬಳ್ಳಾರಿ ಹೆಡ್ ಕ್ವಾರ್ಟರ್ ಆಗಿ ಮುಂದುವರಿಯಬೇಕು. ಹಂಪಿಯನ್ನು ಬಳ್ಳಾರಿಗೆ ಸೇರಿಸಬೇಕು. ಹೊಸಪೇಟೆಗೂ ಬಳ್ಳಾರಿಗೂ ಕೇವಲ 50 ಕಿ.ಮೀ ಇದೆ ಅಷ್ಟೇ. ಇನ್ನೂ ಬದಲಾವಣೆ ಮಾಡಲು ಅವಕಾಶ ಇದೆ. ಹರಪ್ಪನಹಳ್ಳಿಯಿಂದ ಬಳ್ಳಾರಿಗೆ 200 ಕಿ.ಮೀ, ಹಗರಿಬೊಮ್ಮನಹಳ್ಳಿಯಿಂದ ಬಳ್ಳಾರಿಗೆ 150 ಕಿ.ಮೀ ಆಗುತ್ತೆ ಎಂದು ಹೇಳದರು.

‘ನಿಜಲಿಂಗಪ್ಪ ಜಿಲ್ಲೆ’ ಅಂತ ಹೆಸರಿಡಲಿ

ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪ್ಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ಇದೆಲ್ಲ ಸೇರಿಸಿ ‘ನಿಜಲಿಂಗಪ್ಪ ಜಿಲ್ಲೆ’ ಅಂತ ನಾಮಕರಣ ಮಾಡಲಿ. ಇದರಿಂದ ಅಲ್ಲಿನ ಜನರಿಗೂ ಸಹಕಾರ, ಸಹಾಯ ಆಗುತ್ತೆ. ಈಗಿನ ವಿಜಯನಗರ ಜಿಲ್ಲೆಗೆ ‘ನಿಜಲಿಂಗಪ್ಪ ಜಿಲ್ಲೆ’ ಅಂತ ಹೆಸರಿಡಲಿ. ಬಳ್ಳಾರಿಗೆ ವಿಜಯನಗರ ಜಿಲ್ಲೆ ಅಂತ ನಾಮಕರಣ ಮಾಡಲಿ ಎಂದು ಜನಾರ್ದನ ರೆಡ್ಡಿ ಆಗ್ರಹ ಮಾಡಿದರು.

RELATED ARTICLES

Related Articles

TRENDING ARTICLES