Sunday, May 12, 2024

ಮತ್ತೊಮ್ಮೆ ಘರ್ಜಿಸಿದ ರಿಂಕು ಸಿಂಗ್, ಸೂರ್ಯ ಬೊಂಬಾಟ್ ಬ್ಯಾಟಿಂಗ್

ಬೆಂಗಳೂರು : ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಫ್ಯೂಚರ್ ಗ್ರೇಟ್ ಫಿನಿಷರ್ ರಿಂಕು ಸಿಂಗ್ ಮತ್ತೊಮ್ಮೆ ಘರ್ಜಿಸಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಕ್ರೀಸ್​ಗೆ ಆಗಮಿಸಿದ ರಿಂಕು ಸಿಂಗ್ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಉತ್ತಮ ಸಾಥ್ ನೀಡಿದರು.

ಹರಿಣಗಳ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ರಿಂಕು, 30 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು. ಇದು ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ರಿಂಕು ಸಿಂಗ್ ಅವರ ಮೊದಲ ಅರ್ಧಶತಕವಾಗಿದೆ. 39 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 9 ಬೌಂಡರಿ ನೆರವಿನೊಂದಿಗೆ 68 ರನ್​ ಸಿಡಿಸಿರುವ ರಿಂಕು ಇನ್ನೂ ಕ್ರೀಸ್​ನಲ್ಲಿದ್ದಾರೆ.

ಮಿಂಚಿದ ನಾಯಕ ಸೂರ್ಯ

ಆರಂಭಿಕ ಆಟಗಾರರಾದ ಶುಭ್​ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಶೂನ್ಯ ಸುತ್ತಿ ಬಂದ ಹಾದಿಯಲ್ಲೇ ಪೆವಿಲಿಯನ್​ನತ್ತ ಮುಖ ಮಾಡಿದರು. ತಿಲಕ್ ವರ್ಮಾ 29 ರನ್​ ಸಿಡಿಸಿ ಔಟಾದರು. ಈ ವೇಳೆ ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಸೂರ್ಯಕುಮಾರ್ ಯಾದವ್ ಆಸರೆಯಾದರು. 36 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅರ್ಧಶತಕ (56) ಸಿಡಿಸಿದರು.

RELATED ARTICLES

Related Articles

TRENDING ARTICLES