Saturday, May 18, 2024

Bigg Boss Kannada: ತನಿಷಾ ಟೀಚರ್​ಗೆ ಲವ್‌ ಪ್ರಪೋಸ್‌ ಮಾಡಿದ್ರಾ ವರ್ತೂರು ಸಂತೋಷ್‌?

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ ಕಳೆದ ವಾರ ರಕ್ಕಸರಾದವರು ಈ ವಾರ ಸಮವಸ್ತ್ರ ತೊಟ್ಟಿ ಮಕ್ಕಳಾಗಿದ್ದಾರೆ. 

ಈ ವಾರ ದೊಡ್ಮನೆಯಲ್ಲಿ ಮನೆಯೊಳಗೆ ಪ್ರಾಥಮಿಕ ಶಾಲೆ ತೆರೆದಿದ್ದಾರೆ. ಈ ಟಾಸ್ಕ್‌ ಮೂಲಕ ಸ್ಪರ್ಧಿಗಳನ್ನು ಬಾಲ್ಯಕ್ಕೆ ಕರೆದೊಯ್ಯಲಾಗುವುದು ಎಂದು ಬಿಗ್‌ಬಾಸ್‌ ಹೇಳಿದ್ದಾರೆ.

ಟೀಚರ್​ ಆದ ತನಿಷಾ

ತನಿಷಾ ಈ ಪ್ರಾಥಮಿಕ ಶಾಲೆಯ ಟೀಚರ್‌. ‘ವ್ಯಕ್ತಿತ್ವ ವಿಕಸನ’ದ ಬಗ್ಗೆ ಪಾಠ ಮಾಡುವ ಜವಾಬ್ದಾರಿ ಅವರ ಹೆಗಲೇರಿದೆ. ಅದರಂತೆ ಕೈಯಲ್ಲಿ ಬೆತ್ತ ಹಿಡಿದುಕೊಂಡ ಬಂದ ತನಿಷಾಗೆ ವರ್ತೂರು ಸಂತೋಷ್‌ ಕಡೆಯಿಂದ ಮೆಚ್ಚುಗೆ ಲಭಿಸಿದೆ.

ಸ್ಲೇಟ್ ಮೇಲೆ ಐ ಲವ್ ಯೂ ಎಂದು ಬರೆದ ವರ್ತೂರು

ಲಾಸ್ಟ್‌ ಬೆಂಚ್‌ ಹುಡುಗ ವರ್ತೂರು ಸಂತೋಷ್‌ ‘ನೀವ್ ಚೆನ್ನಾಗ್ ಕಾಣಿಸ್ತಾ ಇದೀರಾ ಮಿಸ್‌’ ಎಂದು ನಿಂತಲ್ಲೇ ಕೈ ಬೀಸಿದ್ದಾರೆ. ಇದರಿಂದ ತನಿಷಾ ನಾಚಿ ನೀರಾಗಿದ್ದಾರೆ. ಅಲ್ಲದೆ ಸ್ಲೇಟ್ ಮೇಲೆ ಐ ಲವ್ ಯೂ ಎಂದು ಬರೆದ ವರ್ತೂರ್ ಸಂತೋಷ್, ಅದನ್ನು ತನಿಷಾಗೆ ನೀಡಿದ್ದಾರೆ. ಇದಕ್ಕೆ ಖಡಕ್‌ ಮಿಸ್‌ ತನಿಷಾ ಬೆಂಚ್‌ ಮೇಲೆ ನಿಲ್ಲುವ ಶಿಕ್ಷೆಯನ್ನೂ ನೀಡಿದ್ದಾರೆ.

 

RELATED ARTICLES

Related Articles

TRENDING ARTICLES