Monday, December 23, 2024

Bharathi Vishnuvardhan: ಭಾರತಿ ವಿಷ್ಣುವರ್ಧನ್ ಆರೋಗ್ಯದಲ್ಲಿ ಏರುಪೇರು!

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ಅಳಿಯ ಅನಿರುದ್ಧ್ ಮಾಹಿತಿ ನೀಡಿದ್ದಾರೆ.

ಮಂಡಿನೋವಿನಿಂದ ಭಾರತಿ ಅಮ್ಮ ಹಾಸಿಗೆ ಹಿಡಿದಿದ್ದಾರೆ. ಅವರಿಗೆ ಊಟವನ್ನು ಹೆಚ್ಚಾಗಿ ತಿನ್ನಲು ಆಗ್ತಿಲ್ಲ. ನಿಶಕ್ತರಾಗಿದ್ದಾರೆ. ಅಮ್ಮನ ಆರೋಗ್ಯ ಸರಿಯಿಲ್ಲ. ಅನಾರೋಗ್ಯ ಕಾಡುತ್ತಿದೆ ಎಂದಿದ್ದಾರೆ.

ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಐದೂ ಭಾಷೆಗಳಲ್ಲಿಯೂ ನಟಿಸಿರುವ ಭಾರತಿ ವಿಷ್ಣುವರ್ಧನ್​ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡದಲ್ಲಿ ನಟರಾದ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್, ರಾಜೇಶ್ ಸಿನಿಮಾಗೆ ಜೋಡಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ಧಾರೆ.

RELATED ARTICLES

Related Articles

TRENDING ARTICLES