Sunday, December 22, 2024

ವಿಜಯಪುರದಲ್ಲಿ ಹರಿದ ನೆತ್ತರು : ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ

ವಿಜಯಪುರ : ಬೆಳ್ಳಂ ಬೆಳಿಗ್ಗೆ ಯುವಕನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ನಗರದ ಜುಮ್ಮಾ ಮಸೀದಿಯ ಝೆಂಡಾ ಕಟ್ಟೆಯ ಹಳಕೇರಿ ಓಣಿಯಲ್ಲಿ ನಡೆದಿದೆ.

ಸಾಹಿಲ್ ಬಾಂಗಿ (21) ಮೃತ ಯುವಕ. ನಿನ್ನೆ ತಡರಾತ್ರಿಯಿಂದ ಇಂದು ನಸುಕಿನ ಅವಧಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್ಪಿ ಹಾಗೂ ಇತರೆ ಆಧಿಕಾರಿಗಳು ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ, ಹಂತಕರ ಪತ್ತೆಗೆ ಮುಂದಾಗಿದ್ದಾರೆ.

ಹತ್ಯೆ ಕುರಿತು ಸ್ಥಳೀಯರು ಗೋಲ್ ಗುಂಬಜ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಗೋಲಗುಮ್ಮಟ ಪೊಲೀಸರು ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಸುತ್ತಮುತ್ತಲ ಜನರ ವಿಚಾರಣೆ ಮಾಡಿ ಸಾಹಿಲ್ ಬಾಂಗಿ ಕೊಲೆಗೆ ಯಾರು ಕಾರಣವೇನು ಎನ್ನುವುದರ ಪತ್ತೆಗೆ ಮುಂದಾಗಿದ್ದರು. ಇದೇ ವೇಳೆ ಎಸ್ಪಿ ಋಷಿಕೇಶ ಸೋನೆವಣೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಶ್ವಾನದಳ ಬೆರಳಚ್ಚು ತಜ್ಞರ ತಂಡವೂ ಹಂತಕರ ಜಾಡಿಗಾಗಿ ಪರೀಕ್ಷೆ ನಡೆಸಿದರು.

RELATED ARTICLES

Related Articles

TRENDING ARTICLES