Monday, May 20, 2024

ನರೇಗಾದಲ್ಲಿ ವ್ಯಾಪಕ ಭ್ರಷ್ಟಾಚಾರ: ದೇವದುರ್ಗ ತಾಲ್ಲೂಕಿನ ನಾಲ್ವರು ಪಿಡಿಒ ಅಮಾನತು

ದೇವದುರ್ಗ: 33 ಗ್ರಾಮ ಪಂಚಾಯಿತಿಗಳಲ್ಲಿ ನಡೆದ 150 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಪರಿಶೀಲನೆ ನಡೆಸಿ ನೀಡಿದ ವರದಿ ಆಧರಿಸಿ ಜಿಲ್ಲಾ ಪಂಚಾಯಿತಿ ಸಿಇಒ ನಾಲ್ವರು ಪಿಡಿಒಗಳನ್ನು ಅಮಾನತು ಮಾಡಿದ್ದಾರೆ.

ಜಾಲಹಳ್ಳಿ ಪಂಚಾಯಿತಿ ಪಿಡಿಒ ಪತ್ತೆಪ್ಪ ರಾಥೋಡ, ಶಾವಂತಗೇರಾ ಪಂಚಾಯಿತಿ ಪಿಡಿಒ ಗುರುಸ್ವಾಮಿ, ಕ್ಯಾದಿಗೇರಾ ಗ್ರಾಮ ಪಂಚಾಯಿತಿ ಪಿಡಿಒ ಸಿ.ಬಿ.ಪಾಟೀಲ, ಗಾಣದಾಳ ಪಂಚಾಯಿತಿ ಪಿಡಿಒ ಮಲ್ಲಪ್ಪ ಅವರನ್ನು ಇಲಾಖೆ ವಿಚಾರಣೆ ಕಾಯ್ದಿಸಿರಿ ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ನಾಳೆ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ-20 ಪಂದ್ಯ : ಹರಿಣಗಳ ಬೇಟೆಗೆ ಬ್ಲೂ ಬಾಯ್ಸ್ ಸಜ್ಜು

ದೇವದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯಿತಿ ಪಿಡಿಒಗಳ ವಿರುದ್ಧ ರಾಜ್ಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ವರದಿಯಲ್ಲಿ ಅಕ್ರಮ ಉಲ್ಲೇಖಿಸಲಾಗಿದೆ. ಆರು ಮಂದಿಯ ಪಟ್ಟಿ ಇದ್ದರೂ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಪಾಂಡೈ ಅವರು ಆರು ಪಿಡಿಒಗಳ ಅಮಾನತು ಆದೇಶಕ್ಕೆ ಇನ್ನು ಸಹಿ ಹಾಕಿಲ್ಲ.

ಮಾದ್ಯಮ ಪ್ರತಿನಿಧಿಗಳು 15 ದಿನಗಳಿಂದ ಮೊಬೈಲ್‌ಗೆ ಕರೆ ಮಾಡುತ್ತಿದ್ದರೂ ಕರೆ ಸ್ವೀಕರಿಸುತ್ತಿಲ್ಲ. ಅಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಗಳೂ ಭಾಗಿಯಾಗಿರುವುದು ಗುಟ್ಟಾಗಿ ಉಳಿದಿಲ್ಲ. ಜಿಲ್ಲಾ ಪಂಚಾಯಿತಿ ಸಿಇಒ ಅವರು ಆ ಅಧಿಕಾರಿಗಳ ರಕ್ಷಣೆಗೆ ನಿಂತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ದೇವದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳ ಪಿಡಿಒಗಳು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ನಿರ್ದೇಶನದಂತೆ ನಾವು ಕಾಮಗಾರಿ ಕೈಗೊಂಡಿದೇವೆ. ಅವರನು ಬಿಟು ನಮ್ಮ ವಿರುದವಷ್ಟೇ ಏಕೆ ಕ್ರಮ ಕೈಗೊಂಡಿದೀರಿ ಪ್ರಶ್ನಿಸಿದಾರೆ.

ಈ  ವಿಷಯದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಅವರು ಪಿಡಿಒಗಳ ವಿರುದ್ಧ ಮತ್ತಷ್ಟು ಬಿಸಿಯಾಗಿದ್ದಾರೆ. ಪಿಡಿಒಗಳು ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಸಿದ ಹಿರಿಯ ಅಧಿಕಾರಿಗಳ ರಕ್ಷಣೆಗೆ ಎಲ್ಲ ರೀತಿಯ ಪ್ರಯತ್ನ ನಡೆದಿಸುವುದನ್ನು ಜಿಲ್ಲಾ ಪಂಚಾಯಿತಿ ಸಿಬ್ಬಂದಿ ದೃಢಪಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಭ್ರಷ್ಟಾಚಾರ ವಿಷಯದಲ್ಲಿ ಮಾತನಾಡಲು ಜಿಲ್ಲಾಧಿಕಾರಿಯೂ ಹಿಂದೇಟು ಹಾಕುತ್ತಿದ್ದಾರೆ. –

 

 

 

 

 

 

 

RELATED ARTICLES

Related Articles

TRENDING ARTICLES