Wednesday, December 25, 2024

ಸೂರ್ಯನ ಸಂಪೂರ್ಣ ಚಿತ್ರ ಕ್ಲಿಕ್ಕಿಸಿದ ಆದಿತ್ಯ L1

ಬೆಂಗಳೂರು: ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಮಿಷನ್ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯು ಸೂರ್ಯನ ಪೂರ್ಣ ಚಿತ್ರಣವನ್ನು ಸರೆಹಿಡಿದಿದೆ.

ಇಸ್ರೋದ ಈ ಮಹಾ ಸಾಧನೆಯಿಂದ ಇದೀಗ ಸೂರ್ಯನಿಂದ ಲಕ್ಷಾಂತರ ಕಿಲೋಮೀಟರ್ ದೂರದಲ್ಲಿ ಕುಳಿತು, ಸೂರ್ಯನ ಹತ್ತಿರದ ಚಿತ್ರಗಳನ್ನು ನೋಡಲು ಸಾಧ್ಯವಾಗಿದೆ. ಆದಿತ್ಯ-ಎಲ್1 ಬಾಹ್ಯಾಕಾಶದಿಂದ ಸೂರ್ಯನ ಅನೇಕ ಚಿತ್ರಗಳನ್ನು ಹಂಚಿಕೊಂಡಿದೆ.Image

ISRO SUIT ತೆಗೆದ ಚಿತ್ರಗಳನ್ನು X ನಲ್ಲಿ ಪೋಸ್ಟ್ ಮಾಡಿದ್ದು, “SUIT ಪೇಲೋಡ್ ಸೂರ್ಯನ ಪೂರ್ಣ-ಡಿಸ್ಕ್ ಚಿತ್ರಗಳನ್ನು ನೇರಳಾತೀತ ತರಂಗಾಂತರಗಳಲ್ಲಿ ಸೆರೆಹಿಡಿದಿದೆ”

ಇಸ್ರೋ ಬಾಹ್ಯಾಕಾಶ ನೌಕೆ ಆದಿತ್ಯ-ಎಲ್1 ನೇರಳಾತೀತ ತರಂಗಾಂತರದಲ್ಲಿ ಸೂರ್ಯನ ಪೂರ್ಣ-ಡಿಸ್ಕ್ ಚಿತ್ರಗಳನ್ನು ಸೆರೆಹಿಡಿದಿದೆ. ಸೂರ್ಯನ ಈ ಚಿತ್ರಗಳನ್ನು ಆದಿತ್ಯ-L1 ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಲಾಗಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (SUIT) ಉಪಕರಣದಿಂದ ಸೆರೆಹಿಡಿಯಲಾಗಿದೆ.

ಇದನ್ನೂ ಓದಿ: ಇನ್ಮುಂದೆ ಇಂದಿರಾ ಕ್ಯಾಂಟೀನ್​ನಲ್ಲಿ ಒಟಿಪಿ ಕೊಟ್ಟರಷ್ಟೆ ಊಟ!

“ಆದಿತ್ಯ-ಎಲ್ 1 ನಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (ಎಸ್‌ಯುಐಟಿ) ಉಪಕರಣವು 200-400 ಎನ್‌ಎಂ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿದಿದೆ” ಎಂದು ಇಸ್ರೋ ತಿಳಿಸಿದೆ.

ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC-SHAR) ಆದಿತ್ಯ-L1 ಏಳು ಪೇಲೋಡ್‌ಗಳೊಂದಿಗೆ ಉಡಾವಣೆಗೊಂಡಿತ್ತು. TL1I ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ L1 ಪಾಯಿಂಟ್‌ ಕಡೆಗೆ ಭೂ ಕಕ್ಷೆಯಿಂದ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿತ್ತು.

 

 

 

RELATED ARTICLES

Related Articles

TRENDING ARTICLES