Saturday, July 27, 2024

ಇನ್ಮುಂದೆ ಇಂದಿರಾ ಕ್ಯಾಂಟೀನ್​ನಲ್ಲಿ ಒಟಿಪಿ ಕೊಟ್ಟರಷ್ಟೆ ಊಟ!

ಬೆಂಗಳೂರು: ಇಂದಿರಾ ಕ್ಯಾಂಟೀನ್​​ ಸಂಬಂಧ ನಾಲ್ಕು ಝೋನ್​​​ಗಳಲ್ಲಿ ಟೆಂಡರ್ ಕರೆಯಲಾಗಿದೆ. ಹೊಸ ಟೆಂಡರ್​ ನಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್​​​ಗೆ ಬರುವ ಮಂದಿಗೆ ಒಂದೊಂದು
ಮಾರ್ಷಲ್​ಗಳನ್ನ ಇಟ್ಟು ನೋಡಲು ಸಾಧ್ಯವಿಲ್ಲ. ಕಳೆದ ಬಾರಿ ಕ್ಯಾಂಟೀನ್​​ ಬಳಿ ಒಬ್ಬ ಮಾರ್ಷಲ್​ ಅನ್ನು ನೇಮಕ ಮಾಡಿದ್ದೆವು. ಎಷ್ಟು ಜನ ಊಟ ಮಾಡಿದ್ದರು ಅನ್ನೋದಕ್ಕೆ ಮಾರ್ಷಲ್​ ಲೆಕ್ಕ ನೀಡುತ್ತಿದ್ದರು. ಆದರೇ ಆ ಲೆಕ್ಕ ಸರಿ ಇಲ್ಲ ಅಂತ ಗುತ್ತಿಗೆದಾರರು ಆರೋಪ ಮಾಡಿದ್ದರು.

ಇದನ್ನೂ ಓದಿ: ಅವರ ಬಗ್ಗೆ ಮಾತನಾಡುವಾಗ ಹುಷಾರ್​: ಯತ್ನಾಳ್​​ಗೆ ರೇಣುಕಾಚಾರ್ಯ ಎಚ್ಚರಿಕೆ!

ಕಳೆದ ಬಾರಿ ಗುತ್ತಿಗೆದಾರರು ನಮ್ಮ ಮೇಲೆ ಆರೋಪ ಮಾಡಿ ಕೋರ್ಟ್​ಗೆ ಹೋಗಿದ್ದರು. ಆದ್ದರಿಂದ ಈ ಬಾರಿ ಇಂದಿರಾ ಕ್ಯಾಂಟೀನ್​ನಲ್ಲಿ ಡಿಜಿಟಲ್ ಮಾದರಿಯಲ್ಲಿ ಎಲ್ಲವೂ ನಡೆಯಲಿದೆ. ಓಟಿಪಿ ಆಧಾರದ ಮೇಲೆ ಊಟ ನೀಡಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

RELATED ARTICLES

Related Articles

TRENDING ARTICLES