Sunday, November 24, 2024

ನಾನು ‘ಮೋದಿ ಜೀ’ ಅಲ್ಲ, ನಾನು ಮೋದಿ ಅಷ್ಟೇ : ಪ್ರಧಾನಿ ಮೋದಿ ಮನವಿ

ನವದೆಹಲಿ : ನಾನು ‘ಮೋದಿ ಜೀ’ ಅಲ್ಲ, ನಾನು ಮೋದಿ ಅಷ್ಟೇ. ಹೀಗಾಗಿ, ಮೋದಿ ಜೀ ಎಂದು ಕರೆಯುವ ಮೂಲಕ ಸಾರ್ವಜನಿಕರಿಂದ ನನ್ನನ್ನು ದೂರ ಮಾಡಬೇಡಿ ಎಂದು ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಾಡಿದ ಪ್ರಧಾನಿಯವರು ದಯವಿಟ್ಟು ಮೋದಿ ಜೀ ಎಂದು ಕರೆಯಬೇಡಿ ಅಂತ ಸಂಸದರನ್ನು ಕೇಳಿಕೊಂಡರು. ಇದರಿಂದ ದೇಶದ ಜನ ಹಾಗೂ ನನ್ನ ನಡುವೆ ಅಂತರ ಇರುವಂತೆ ನನಗೆ ಕಾಡುತ್ತದೆ. ಹೀಗಾಗಿ, ನನ್ನನ್ನು ಮೋದಿ ಎಂದಷ್ಟೇ ಕರೆಯಿರಿ ಎಂದು ಹೇಳಿದ್ದಾರೆ.

ಮೋದಿ ಜೀ ಅಥವಾ ಆದರಣೀಯ ಮೋದಿಜಿ ಎಂಬ ಪದಗಳು ನನ್ನ ಹಾಗೂ ಜನತೆ ನಡುವೆ ಅಂತರ ತರುವಂತೆ ಭಾಸವಾಗುತ್ತದೆ. ಮೋದಿ ಎಂದರೆ ಮತ್ತಷ್ಟು ಆತ್ಮೀಯತೆ ಕಾಣಿಸುತ್ತದೆ. ನಾನೊಬ್ಬ ಬಿಜೆಪಿ ಪಕ್ಷದ ಸಣ್ಣ ಕಾರ್ಯಕರ್ತ. ಜನರು ನನ್ನನ್ನು ಅವರ ಕುಟುಂಬ ಓರ್ವ ಸದಸ್ಯನಾಗಿ ಕಂಡಿದ್ದಾರೆ. ಆದರೆ, ನನ್ನ ಹೆಸರಿನ ಹಿಂದೆ ಮುಂದೆ ಶ್ರೀ, ಆದರಣೀಯ ಜಿ ಎಂಬ ಪದಗಳು ಸೇರಿಸುವುದರಿಂದ ಅಂತರ ಕಾಯ್ದುಕೊಂಡಂತೆ ಆಗಲಿದೆ. ಹೀಗಾಗಿ, ಮೋದಿ ಎಂದರೆ ಸಾಕು ಎಂದು ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಮೋದಿಯೂ ಕೂಡ ಒಬ್ಬ ಸಂಸದರಂತೆ

ಪ್ರಧಾನಿ ಮೋದಿ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತ ಮತ್ತು ಜನಸಾಮಾನ್ಯರಂತೆ ಇರಲು ಬಯಸುತ್ತಾರೆ. ಹೀಗಾಗಿ, ತಮ್ಮ ಕುಟುಂಬದ ಭಾಗವೆಂದು ಪರಿಗಣಿಸುವಂತೆ ಹೇಳುತ್ತಾರೆ. ಇತರೆ ಸಂಸದರಂತೆ ಮೋದಿಯೂ ಕೂಡ ಒಬ್ಬ ಸಂಸದರಂತೆ ಭಾವಿಸಬೇಕು ಎಂದು ಅವರು ನಂಬುತ್ತಾರೆ ಎಂದು ಸಭೆಯಲ್ಲಿದ್ದ ಸಂಸದರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES