Monday, December 23, 2024

ಪಾಪಿಗಳು..! ಮೋರಿಯಲ್ಲಿ ಎರಡು ವರ್ಷದ ಹೆಣ್ಣು ಮಗುವಿನ ಶವ ಪತ್ತೆ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಮೋರಿಯೊಂದರಲ್ಲಿ ಸುಮಾರು 2 ವರ್ಷದ ಹೆಣ್ಣು ಮಗುವಿನ ಶವಯೊಂದು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಯಾರೋ ಪಾಪಿಗಳು ಕೊಂದಿರಬಹುದು ಅಥವಾ ಯಾವುದೋ ಕಾರಣಕ್ಕೆ ಮೃತ ಪಟ್ಟಿರಬಹುದು. ಸತ್ತ ನಂತರ ಮಗುವಿನ ಶವವನ್ನ ಮೋರಿಯಲ್ಲಿ ಇಟ್ಟು ಪರಾರಿ ಆಗಿದ್ದಾರೆ. ಮಗುವಿನ ಕೆಳಗೆ ಸೀರೆ ಹಾಕಿ ಮಗುವಿನ ಶವ ಇಟ್ಟು ಹೋಗಿದ್ದಾರೆ.

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಜನ ಉತ್ತರ ಭಾರತೀಯರು ವಾಸವಿದ್ದು ಆ ಮಗುವು ಸಹ ಉತ್ತರ ಭಾರತೀಯರದ್ದೆ ಆಗಿರಬಹುದು ಎಂದು ಶಂಕಿಸಲಾಗಿದೆ. ಇನ್ನೂ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES