Tuesday, January 7, 2025

ಮಗನ ಪಂದ್ಯ ವೀಕ್ಷಿಸಲು ಬಂದ ರಾಹುಲ್​ ದ್ರಾವಿಡ್​ ದಂಪತಿ!

ಮೈಸೂರು: ಮಗನ ಕ್ರಿಕೆಟ್​ ಪಂದ್ಯ ವೀಕ್ಷಿಸಲು ತಮ್ಮ ಪತ್ನಿಯೊಂದಿಗೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್​ ದ್ರಾವಿಡ್​ ಆಗಮಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

ಮಾನಸಗಂಗೋತ್ರಿ ಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈಸೂರು ವಲಯ ಆಯೋಜಿಸಿದ್ದ 19 ವರ್ಷದೊಳಗಿನವರ ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯ ಪಂದ್ಯವನ್ನು ವೀಕ್ಷಿಸಲು ದ್ರಾವಿಡ್ ಆಗಮಿಸಿದ್ದರು.

ಇದನ್ನೂ ಓದಿ: PSI ಮರುಪರೀಕ್ಷೆ ಮುಂದೂಡಲು ಶಾಸಕರಿಂದ ಮನವಿ

ರಾಹುಲ್ ತಮ್ಮ ಪುತ್ರ ಸಮಿತ್ ದ್ರಾವಿಡ್ ಆಟ ನೋಡಲು ಅವರು ಪತ್ನಿ ವಿಜೇತಾ ಅವರೊಂದಿಗೆ ಬಂದಿದ್ದರು. ಮೈದಾನದ ಕಲ್ಲುಕಟ್ಟೆಯ ಮೇಲೆ ಕುಳಿತು ಅವರು ಪಂದ್ಯವನ್ನು ವೀಕ್ಷಿಸಿದರು. ಈ ಪಂದ್ಯಾವಳಿಯಲ್ಲಿ 5 ಓವರ್ ಬೌಲಿಂಗ್ ಮಾಡಿದ ಸಮಿತ್ 11 ರನ್‌ಗಳನ್ನಷ್ಟೆ (2 ಮೇಡನ್) ನೀಡಿದರು.

ಬಳಿಕ ಪತ್ರಕರ್ತರೊಂದಿಗೆ ಹೆಚ್ಚು ಮಾತನಾಡಲು ಬಯಸದ ದ್ರಾವಿಡ್. ಎಲ್ಲ ಅಪ್ಪಂದಿರಂತೆ ನಾನೂ ಮಗನ ಆಟ ನೋಡಲು ಬಂದಿದ್ದೇನೆ. ಇದರಲ್ಲಿ ವಿಶೇಷವೇನಿಲ್ಲ ಎಂದಷ್ಟೇ ಪ್ರತಿಕ್ರಿಯಿಸಿದರು.

RELATED ARTICLES

Related Articles

TRENDING ARTICLES