Monday, May 13, 2024

ಭಾರತ ತಂಡಕ್ಕೆ ಹೆಡ್‌ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಮರು ನೇಮಕ?

ಮುಂಬೈ: ಭಾರತೀಯ ಕ್ರಿಕೆಟ್‌ನ ಬ್ಯಾಟಿಂಗ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಅವರ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಅವಧಿಯನ್ನು ಮುಂದಿನ ಎರಡು ವರ್ಷಗಳಿಗೆ ವಿಸ್ತರಿಸಲು BCCI ನಿರ್ಧರಿಸಿದೆ.

ದ್ರಾವಿಡ್‌ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಟೆಸ್ಟ್‌ ಚಾಂಪಿಯನ್‌ಶಿಪ್‌ ಮತ್ತು ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ರನ್ನರ್‌ ಅಪ್‌ ಆಗಿದೆ. 2021ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಹೆಡ್‌ ಕೋಚ್‌ ಹುದ್ದೆಯನ್ನು ಅಲಂಕರಿಸಿದ್ದ ರಾಹುಲ್‌ ದ್ರಾವಿಡ್‌, ಇತ್ತೀಚೆಗೆ ಅಂತ್ಯವಾಗಿದ್ದ ಏಕದಿನ ವಿಶ್ವಕಪ್‌ ಟೂರ್ನಿಯ ಬಳಿಕ ಅವರ ಅವಧಿ ಮುಗಿದಿತ್ತು.

ಇದನ್ನೂ ಓದಿ: OTT ಪ್ಲಾಟ್​ಫಾರ್ಮ್​ಗಳ ಬಗ್ಗೆ ರಿಷಬ್ ಅಸಮಾಧಾನ!

ಈ ಹಿನ್ನೆಲೆಯಲ್ಲಿ 2024ರ IPL ಟೂರ್ನಿಯ ಹಲವು ಫ್ರಾಂಚೈಸಿಗಳು ದ್ರಾವಿಡ್‌ ಅವರನ್ನು ಸಂಪರ್ಕಿಸಿದ್ದವು. ದ್ರಾವಿಡ್‌ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಅಲ್ಲದೆ ಹಲವು ಪ್ರತಿಭಾವಂತ ಆಟಗಾರರು ಬೆಳಕಿಗೆ ಬಂದಿದ್ದಾರೆ. 2023ರ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಹಾಗೂ 2023ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಭಾರತ ತಂಡ ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿದೆ. ಹಾಗಾಗಿ ದ್ರಾವಿಡ್‌ ಅವರನ್ನು ಹಿರಿಯರ ತಂಡದಲ್ಲಿ ಉಳಿಸಿಕೊಳ್ಳುವ ಇಂಗಿತವನ್ನು ಹೊಂದಿದೆ.

RELATED ARTICLES

Related Articles

TRENDING ARTICLES