Monday, December 23, 2024

40% ಕಮಿಷನ್​ ಕುರಿತು ನ್ಯಾಯಮೂರ್ತಿಗಳಿಗೆ ದಾಖಲೆ ಸಲ್ಲಿಸಿದ ಕೆಂಪಣ್ಣ!

ಬೆಂಗಳೂರು: 40% ಕಮಿಷನ್​​​ ಆರೋಪ ಕುರಿತು ತನಿಖೆ ನಡೆಸ್ತಿರುವ ನ್ಯಾಯಮೂರ್ತಿ H.N.ನಾಗಮೋಹನ ದಾಸ್​ ಆಯೋಗಕ್ಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಪಿಡಬ್ಲ್ಯೂಡಿ, ನೀರಾವರಿ ಹಾಗೂ ಬಿಬಿಎಂಪಿ ಸೇರಿದಂತೆ ಹಲವು ಇಲಾಖೆಗಳ ಭ್ರಷ್ಟಾಚಾರದ ದಾಖಲೆಗಳನ್ನು ದಾಖಲೆ ನೀಡಿದ್ದಾರೆ.

ಬಳಿಕ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಕೆಂಪಣ್ಣ, ಇಂದು ನಾವು ನ್ಯಾಯಮೂರ್ತಿ ನಾಗಮೋಹನ್​ ದಾಸ್​​ಗೆ ದಾಖಲೆ ಸಲ್ಲಿಸಿದ್ದೇವೆ. ನಾವು ನೀಡಿರುವ ದಾಖಲೆಗಳ ಬಗ್ಗೆ ಈಗ ಚರ್ಚೆ ಮಾಡಲ್ಲ. ಇನ್ನು ಅಡಿಷನಲ್ ದಾಖಲೆಗಳನ್ನ ಕೇಳಿದ್ದಾರೆ. ಇನ್ನು 10 ದಿನದೊಳಗೆ ಇನ್ನುಳಿದ ದಾಖಲೆಗಳನ್ನ ನೀಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ದೇಶದಲ್ಲಿ ಬ್ರಾಂಡ್ ಬೆಂಗಳೂರು ನಂಬರ್ ಒನ್ ಆಗಿಸಬೇಕಿದೆ: ಸಿಎಂ ಸಿದ್ದರಾಮಯ್ಯ ಕರೆ

40 ಪರ್ಸೆಂಟ್​ ಕಮಿಷನ್ ಬಗ್ಗೆಯೂ ದಾಖಲೆಗಳನ್ನ ನೀಡಿದ್ದೇವೆ. ಈಗಿನ ಸರ್ಕಾರದ ಬಗ್ಗೆ 1 ಅಥವಾ 2 ಪ್ರಕರಣಗಳಿವೆ. ನ್ಯಾಯಮೂರ್ತಿಗಳು ತನಿಖೆ ಮಾಡುತ್ತಾರೆ ಎಂದು ಅವರು ತಿಳಿಸಿದರು.

RELATED ARTICLES

Related Articles

TRENDING ARTICLES