Monday, December 23, 2024

ಶ್ರೀ ಮಠದಲ್ಲಿ ‘ಕಾರ್ತಿಕ ದೀಪೋತ್ಸವ’ ಕಾರ್ಯಕ್ರಮ

ಕಾರ್ತಿಕ ದೀಪೋತ್ಸವ ಇಂದು ಕಾರ್ತೀಕ ಮಾಸದ ಕಾರ್ತಿಕ ಸೋಮವಾರ, ಪೂರ್ಣಿಮಾ ತಿಥಿಯಂದು ಶ್ರೀಮಠದಲ್ಲಿ ‘ಕಾರ್ತಿಕ ದೀಪೋತ್ಸವ’ ವನ್ನು ಆಚರಿಸಲಾಗುತ್ತಿದೆ. ಶ್ರೀಮಠದ ಸದ್ಭಕ್ತಾದಿಗಳು ಈ ದೀಪೋತ್ಸವದಲ್ಲಿ ಭಾಗವಹಿಸಿ, ನಿಮ್ಮ ಕಷ್ಟದ ಕತ್ತಲನ್ನು ಹೋಗಲಾಡಿಸಿ, ಸುಖವೆಂಬ ಬೆಳಕನ್ನು ಬೆಳಗುವುದಕ್ಕಾಗಿ ಭಕ್ತರು ಮಠಕ್ಕೆ ಆಗಮಿಸುವಂತೆ ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ.

ಈ ದೀಪೋತ್ಸವದಂದು ಶ್ರೀ ಸಿದ್ಧಲಿಂಗೇಶ್ವರರಿಗೂ ಮತ್ತು ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ತಾಯಿ ಶ್ರೀ ಇಷ್ಟಕಾಮೇಶ್ವರಿ ದೇವಿಗೆ ಅಭಿಷೇಕವನ್ನು ನೆರವೇರಿಸಲಾಗುವುದು ಹಾಗೂ ಈ ದೀಪೋತ್ಸವದಲ್ಲಿ ಭಾಗವಹಿಸುವವರಿಗೆ ದೇವಿಯ ಹಾಗೂ ಗುರುಗಳಿಂದ ಅನುಷ್ಠಾನ ಆಗಿರುವ ರುದ್ರಾಕ್ಷಿಯನ್ನು ನೀಡಲಾಗುವುದು. ಆಸಕ್ತಿಯುಳ್ಳವರು ತಮ್ಮ ಹೆಸರನ್ನು ಮೊದಲೇ ನೊಂದಾಯಿಸಿಕೊಳ್ಳಬೇಕು.
ಹೆಚ್ಚಿನ ವಿಷಯಗಳಿಗೆ ಸಂಪರ್ಕಿಸಿ :63641 67671

RELATED ARTICLES

Related Articles

TRENDING ARTICLES