Sunday, May 19, 2024

ಮಹಿಳೆಯರ ಸುರಕ್ಷತೆಗೆ ಪ್ಯಾನಿಕ್ ಬಟನ್ ಅಳವಡಿಕೆ

ಬೆಂಗಳೂರು: ಮಾಲ್, ಮೆಟ್ರೋ ಸೇರಿದಂತೆ ಹಲವೆಡೆ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬರುತ್ತಿದ್ದು ಬೆಂಗಳೂರಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂಬುದು ಕಾತರಿಯಾಗಿದೆ. ಈ ನಿಟ್ಟಿನಲ್ಲಿ BMTC ಟ್ರಾನ್ಸ್‌ಪೋರ್ಟ್ ಅನ್ನು ಸೇಫ್ ಟ್ರಾನ್ಸ್‌ಪೋರ್ಟ್ ಮಾಡಲು ಹೊರಟಿದೆ.

ಇತ್ತಿಚಿನ ದಿನಗಳಲ್ಲಿ ಬೆಂಗಳೂರಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ. ಈ ನಿಟ್ಟಿನಲ್ಲಿ ಬಿಎಂಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಒತ್ತು ಕೊಡುತ್ತಿದೆ. ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಅನ್ನು ಸೇಫ್ ಟ್ರಾನ್ಸ್‌ಪೋರ್ಟ್ ಮಾಡುವುದಾಗಿ ಬಿಎಂಟಿಸಿ ಎಂಡಿ ಸತ್ಯವತಿ ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ: ಇಂದು ‘ಕಾಂತಾರ’ ಪ್ರೀಕ್ವೆಲ್​​​​ನ ಫಸ್ಟ್‌ ಲುಕ್‌ ಬಿಡುಗಡೆ!

ಮಹಿಳೆಯರು ಬಸ್‍ನಲ್ಲಿ ಪ್ರಯಾಣಿಸುವಾಗ ಏನಾದರೂ ತೊಂದರೆಯಾದರೆ, ಬಸ್ ಸೀಟ್ ಪಕ್ಕದಲ್ಲೇ ಇರೋ ಪ್ಯಾನಿಕ್ ಬಟನ್ ಕ್ಲಿಕ್ ಮಾಡಬಹುದು. ಈ ಬಟನ್ ಕ್ಲಿಕ್ ಮಾಡಿದ ತಕ್ಷಣ ಈ ಅಲರ್ಟ್ ಬಿಎಂಟಿಸಿ ಕಂಟ್ರೋಲ್ ರೂಮ್‍ಗೆ ಬರುತ್ತದೆ. ಜೊತೆಗೆ ಸಾರಥಿಗೆ ಲೋಕೇಶನ್ ಹೋಗುತ್ತದೆ. ಆ ಲೋಕೇಷನ್‍ನಲ್ಲೇ ಬಿಎಂಟಿಸಿ ಟೀಮ್ ಬರುತ್ತದೆ.

RELATED ARTICLES

Related Articles

TRENDING ARTICLES