Monday, November 18, 2024

ಮುಂದಿನ ಜನತಾ ದರ್ಶನಕ್ಕೆ ಇಷ್ಟೊಂದು ಜನ ಬರಬಾರದು : ಸಿದ್ದರಾಮಯ್ಯ ಮನವಿ

ಬೆಂಗಳೂರು : ಮುಂದಿನ ಜನತಾ ದರ್ಶನಕ್ಕೆ ಇಷ್ಟೊಂದು ಜನ ಬರಬಾರದು. ಇಷ್ಟು ಜನ ಬಂದರೆ ಸ್ಥಳೀಯ ಮಟ್ಟದಲ್ಲಿ ಅವರಿಗೆ ಪರಿಹಾರ ಸಿಗುತ್ತಿಲ್ಲ ಅಂತ ಅರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜನತಾ ದರ್ಶನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು 3,500 ಸಾವಿರ ಅರ್ಜಿಗಳು ಬಂದಿವೆ. ಇನ್ನೂ ಜನ ಬರ್ತಿದ್ದಾರೆ. ಈ ಅರ್ಜಿಗಳಿಗೆ ನಾವು ಪರಿಹಾರ ಕೊಡಲು ಕಾನೂನು ರೀತಿ ಪ್ರಯತ್ನ ಮಾಡಲೇಬೇಕು ಎಂದರು.

ಕಾನೂನು ರೀತ್ಯಾ ಪರಿಹಾರ ಕೊಡಲಾಗದಿದ್ದರೆ ಸಂಬಂಧಪಟ್ಟ ಜನರಿಗೆ ತಿಳಿಸಬೇಕು. ಅರ್ಜಿಗಳ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಸಿಎಂ ಕಚೇರಿಗೆ ಮಾಹಿತಿ ಕೊಡಬೇಕು. ನಾನು ಸಿಎಂ ಆದ ನಂತರದಿಂದ ಸಿಎಂ ಪರಿಹಾರ ನಿಧಿಯಿಂದ 25 ಕೋಟಿ ರೂಪಾಯಿ ನೆರವು ನೀಡಲಾಗಿದೆ. ಆರೋಗ್ಯ ಸಮಸ್ಯೆಗಳು ಇರುವವರಿಗೆ ನೆರವು ಇವತ್ತಿನ ಅರ್ಜಿಗಳನ್ನು ಮುಂದಿನ 15 ದಿನಗಳೊಳಗೆ ಇತ್ಯರ್ಥ ಪಡಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ 15 ದಿನಗಳ ಗಡುವು ಕೊಟ್ಟರು.

ಮೂರು ತಿಂಗಳಿಗೊಮ್ಮೆ ಜನತಾ ದರ್ಶನ

ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮಾಡಬೇಕು. ಡಿಸಿಗಳು ತಹಸೀಲ್ದಾರ್ ಕಚೇರಿಗಳಿಗೆ ಭೇಟಿ ಕೊಡಬೇಕು. ಎಸ್‌ಪಿಗಳು ಪೊಲೀಸ್ ಠಾಣೆಗಳಿಗೆ ಭೇಟಿ ಕೊಡಲಿ. ತಳಮಟ್ಟದ ಕಚೇರಿಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ಕೊಟ್ರೆ ಸಮಸ್ಯೆ ಅರ್ಥ ಆಗುತ್ತೆ. ಜನರನ್ನು ಅಲೆಸ್ತಿರೋದ್ಯಾಕೆ ಅಂತ ಗೊತ್ತಾಗುತ್ತೆ. ಜನರನ್ನ ಅಲೆಸೋದು ಭ್ರಷ್ಟಾಚಾರರಕ್ಕೆ ಅವಕಾಶ ಮಾಡಿಕೊಟ್ಟಂತೆ. ಒಂದು ವಾರದೊಳಗೆ ಇವತ್ತು ಪಡೆದ ಅರ್ಜಿಗಳ ಇತ್ಯರ್ಥ ಮಾಡಬೇಕು. ಮೂರು ತಿಂಗಳಿಗೊಮ್ಮೆ ಜನತಾ ದರ್ಶನ ಮಾಡ್ತೇನೆ ಎಂದು ಸಿದ್ದರಾಮಯ್ಯ ಘೋಷಿಸಿದರು.

RELATED ARTICLES

Related Articles

TRENDING ARTICLES