Sunday, May 12, 2024

ಕಳಪೆ ಕಾಮಗಾರಿ : 15 ದಿನಕ್ಕೆ ಹಾಳಾದ ರಸ್ತೆ

ದೊಡ್ಡಬಳ್ಳಾಪುರ:  ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆಗಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಲೇ ಇರುತ್ತದೆ. ಆದ್ರೆ ಅವೆಲ್ಲ ಅಭಿವೃದ್ಧಿಗೆ ಬಳಕೆ ಆಗುತ್ತವಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. 

ಹೌದು, ರಸ್ತೆ ನಿರ್ಮಾಣಗೊಂಡು ಕೇವಲ 15 ದಿನಕ್ಕೆ ಡಾಂಬರ್ ಕಿತ್ತು ಹೋಗಿರುವ ಘಟನೆ ದೊಡ್ಡಬಳ್ಳಾಪುರದ ಹೊನ್ನಾದೇವಿಪುರದ ರಸ್ತೆಯಲ್ಲಿ ನಡೆದಿದ್ದು, ಸಾರ್ವಜಿಕರ ಸಂಚಾರಕ್ಕೂ ತೊಂದರೆಯಾಗಿದೆ.

KRDL ಸಂಸ್ಥೆಯಿಂದ 1 ಕೋಟಿ ಅನುದಾನದಲ್ಲಿ 1.5 ಕಿಮೀ ಡಾಂಬರ್ ಹಾಕಲಾಗಿತ್ತು. ರಸ್ತೆಯುದ್ದಕ್ಕೂ ನೂರಾರು ಗುಂಡಿಗಳು ಬಿದ್ದಿವೆ‌. ಕೈಯಲ್ಲಿ ಗುಡಿಸಿದರೆ ಡಾಂಬರ್ ಕಿತ್ತು ಬರುತ್ತಿದೆ. ಅದರೆ ರಸ್ತೆ ಮಾಡಿದ 15ನೇ ದಿನಕ್ಕೆ ರಸ್ತೆಯುದ್ಧಕ್ಕೂ ನೂರಾರು ಗುಂಡಿಗಳು ಬಿದ್ದು ಸಾರ್ವಜನಿಕರಿಗೆ ಸಮಸ್ಸೆಯಾಗಿದೆ.

ಶಾಶ್ವತ ಪರಿಹಾರ ಸಿಕ್ತು ಅಂದುಕೊಂಡವರಿಗೆ ಶಾಕ್

20 ವರ್ಷಗಳಿಂದ ಈ ಗ್ರಾಮಕ್ಕೆ ರಸ್ತೆ ಇರಲಿಲ್ಲ. ಗ್ರಾಮಸ್ಥರು ರಾತ್ರಿ ಹೊತ್ತು ಓಡಾಡಲೂ ಪರದಾಟ ನಡೆಸುತ್ತಿದ್ರು. ಇನ್ನೇನು ನಮಗೆ ಶಾಶ್ವತ ಪರಿಹಾರ ಸಿಕ್ಕಿತು ಎನ್ನುವಷ್ಟರಲ್ಲಿ ಕಳಪೆ ಕಾಮಗಾರಿಗೆ ಜನ ಬೇಸತ್ತಿದ್ದಾರೆ.

 ಸಾರ್ವಜನಿಕರ ಆರೋಪಗಳೇನು..? 

ಕಳಪೆ ಕಾಮಗಾರಿಯಿಂದ ಬೇಸತ್ತು ಗುತ್ತಿಗೆದಾರರನ್ನ ಬ್ಲಾಕ್ ಲಿಸ್ಟ್‌ಗೆ ಸೇರಿಸಲು ಒತ್ತಾಯ ಕೂಡಲೆ ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಡುರಸ್ತೆಯಲ್ಲೇ ಕುಳಿತು ಮಹಿಳೆಯರ ಪ್ರತಿಭಟನೆ ಮಾಡಿದ್ದಾರೆ.

 

 

 

RELATED ARTICLES

Related Articles

TRENDING ARTICLES