Wednesday, December 25, 2024

ಈ ಬಾರಿ ವಿಶ್ವಕಪ್ ನಮ್ಮದಾದ್ರೆ ಎಲ್ಲಿಲ್ಲದ ಸಂತೋಷ : ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ

ವಿಜಯನಗರ : ವಿಶ್ವಕಪ್-2023 ಟೂರ್ನಿಯ ಫೈನಲ್​ನಲ್ಲಿ ನಮಗೆ ಜಯ ಸಿಗಲಿ ಅಂತ ನಮ್ಮ ಸಮುದಾಯದಿಂದ ಹಾರೈಸುವೆ ಎಂದು ಪದ್ಮಶ್ರೀ ಪುರಸ್ಕೃತೆ ಡಾ. ಮಂಜಮ್ಮ ಜೋಗತಿ ಹೇಳಿದರು.

ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ಬಾರಿ ವಿಶ್ವಕಪ್ ನಮ್ಮದಾದ್ರೆ ಎಲ್ಲಿಲ್ಲದ ಸಂತೋಷ ಸಿಗುತ್ತದೆ ವಿಶ್ವಕಪ್ ಪಂದ್ಯಾವಳಿಯಲ್ಲಿ ನಮ್ಮ ತಂಡ ಜಯಶಾಲಿ‌ ಆಗಲಿ ಅಂತ ಮತ್ತೊಮ್ಮೆ ಹಾರೈಸುತ್ತೇನೆ ಎಂದು ತಿಳಿಸಿದರು.

1983 ರಲ್ಲಿ ಮೊದಲ ಬಾರಿಗೆ ಭಾರತ ಕಪಿಲ್‌ದೇವ್ ನೇತೃತ್ವದಲ್ಲಿ ವಿಶ್ವಕಪ್ ಗೆದ್ದಿತ್ತು. ಇಂಗ್ಲೆಂಡ್​ನಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧ ಗೆಲುವು ಸಾಧಿಸಿತ್ತು. ಎರಡನೇ ಬಾರಿಗೆ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು, ವಿಶ್ವಕಪ್ ಎತ್ತಿ ಹಿಡಿದಿತ್ತು. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಇದೀಗ ಭಾರತ ವಿಶ್ವಕಪ್ ಫೈನಲ್​ಗೆ ಲಗ್ಗೆ ಇಟ್ಟಿದೆ. ವಿಶ್ವಕಪ್ ಪಂದ್ಯಾವಳಿ ಗುಜರಾತ್ ನಲ್ಲಿ ಭಾನುವಾರ ನಡೆಯಲಿದೆ. ಭಾರತ ಕಪ್ ಗೆಲ್ಲಲಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES