Thursday, December 19, 2024

ವಿರೋಧ ಪಕ್ಷದ ನಾಯಕನಾಗಿ ಆರ್‌. ಅಶೋಕ್‌ ಆಯ್ಕೆ

ಬೆಂಗಳೂರು : ಆರು ತಿಂಗಳ ಬಳಿಕ ಕೊನೆಗೂ ಆಡಳಿತ ಪಕ್ಷವನ್ನೂ ಎದುರಿಸುವ ವಿರೋಧ ಪಕ್ಷದ ನಾಯಕ ಸ್ಥಾನವನ್ನ ರಾಜ್ಯ ಬಿಜೆಪಿ ಆಯ್ಕೆ ಮಾಡಿದೆ.

ನಗರದ ಐಟಿಸಿ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗದ ಬಹು ನಿರೀಕ್ಷಿತ ಸಭೆಯಲ್ಲಿ ಆರ್‌. ಅಶೋಕ್‌ ಅವರಿಗೆ ವಿರೋಧ ಪಕ್ಷದ ನಾಯಕ ಪಟ್ಟ ಒಲಿದಿದೆ. ಆರ್. ಅಶೋಕ್, ಅಶ್ವತ್ ನಾರಾಯಣ, ಸುನೀಲ್‌ಕುಮಾರ್, ಅರಗ ಜ್ಞಾನೇಂದ್ರ, ಯತ್ನಾಳ್ ಈ ರೇಸ್ ನಲ್ಲಿದ್ದರು.

ಸಭೆಯಲ್ಲಿ ಕೇಂದ್ರದಿಂದ ಚುನಾವಣಾವೀಕ್ಷಕರಾಗಿ ಆಗಮಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್‌ಕುಮಾರ್ ಗೌತಮ್ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದರು.

ಆರ್​.ಅಶೋಕ್​ ಆಯ್ಕೆಗೆ ಕಾರಣಗಳೇನು?

ಪದ್ಮನಾಭನಗರ ಶಾಸಕ ಆರ್‌.ಅಶೋಕ್ ರಾಜ್ಯ ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರು. ಮೈಸೂರು ಭಾಗದ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ನಾಯಕ ಆರ್‌. ಅಶೋಕ್ ಅವರಾಗಿದ್ದಾರೆ. ಇದರ ಜೊತೆಗೆ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಮತ್ತು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಜೊತೆಗೂ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಆರ್.ಅಶೋಕ್ ಆಯ್ಕೆ ಮಾಡುವಂತೆ ಹೆಚ್‌ಡಿಡಿ ಹಾಗೂ ಹೆಚ್‌ಡಿಕೆ ಬಿಜೆಪಿ ಹೈಕಮಾಂಡ್ ನಾಯಕರ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆರ್. ಅಶೋಕ್ ಅವರ ಆಯ್ಕೆ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಪ್ಲಸ್ ಆಗುವ ಸಾಧ್ಯತೆ ಇದೆ.

ಮಾಜಿ ಡಿಸಿಎಂ ಆರ್​.ಅಶೋಕ್ ಅವರಿಗೆ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿರುವ ಅನುಭವವಿದೆ. ಆರ್.ಅಶೋಕ್ ಮೂರುವರೆ ದಶಕಗಳಿಂದ ರಾಜಕೀಯ ಗುರುತಿಸಿಕೊಂಡಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷ, ಆರ್.ಅಶೋಕ್ ವಿಪಕ್ಷ ನಾಯಕರಾಗಿ ಮಾಡಿದ್ರೆ ರಾಜ್ಯ ಬಿಜೆಪಿ ಹಳೆಯ ಬೇರು, ಹೊಸ ಚಿಗುರು ಸೂತ್ರದಡಿಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಟ್ಟಿ ಹಾಕಬಹುದು. ವಿಧಾನಸಭೆಯಲ್ಲಿ ಸರ್ಕಾರವನ್ನ ಎಲ್ಲಾ ವಿಚಾರಗಳಲ್ಲೂ ಕಟ್ಟಿ ಹಾಕಬಹುದು ಅನ್ನೋದು ಬಿಜೆಪಿ ಅಸಲಿ ಲೆಕ್ಕಾಚಾರ.

RELATED ARTICLES

Related Articles

TRENDING ARTICLES