Sunday, May 19, 2024

ಅವರು ಒಳ್ಳೆಯ ಕ್ರಿಕೆಟಿಗ.. ಆದ್ರೆ, ಒಳ್ಳೆಯ ಗಂಡ ಆಗಿರಬೇಕಿತ್ತು : ಶಮಿ ಮಾಜಿ ಪತ್ನಿ ಹಸಿನ್

ಬೆಂಗಳೂರು : ವಿಶ್ವಕಪ್​-2023 ಟೂರ್ನಿಯಲ್ಲಿ ಬೊಂಬಾಟ್ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ದಿಲ್ ಕದ್ದ ಮೊಹಮ್ಮದ್ ಶಮಿ ಅವರ ಬಗ್ಗೆ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಅವರು (ಮೊಹಮ್ಮದ್ ಶಮಿ) ಒಳ್ಳೆಯ ಕ್ರಿಕೆಟಿಗ. ಆದರೆ, ಅವರು ಒಳ್ಳೆಯ ವ್ಯಕ್ತಿ ಕೂಡ ಆಗಿರಬೇಕಿತ್ತು. ಅವರು ಒಳ್ಳೆಯವರಾಗಿದ್ದರೆ ಮಗಳು ಹಾಗೂ ನಾನು ಸಂತೋಷದ ಜೀವನ ನಡೆಸಬಹುದಿತ್ತು ಎಂದು ಹಸಿನ್ ಅಭಿಪ್ರಾಯಪಟ್ಟಿದ್ದಾರೆ.

ಉತ್ತಮ ಪತಿ ಹಾಗೂ ಉತ್ತಮ ತಂದೆಯೂ ಆಗಿದ್ದರೆ ಇನ್ನೂ ಹೆಚ್ಚಿನ ಗೌರವದ ವಿಷಯವಾಗುತ್ತಿತ್ತು ಎಂದು ಹೇಳಿದ್ದಾರೆ. ಮುಂದುವರಿದು, ಸೆಮಿಫೈನಲ್​ನಲ್ಲಿ ಮೊಹಮ್ಮದ್ ಶಮಿ ನೀಡಿ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಹಸಿನ್ ಜಹಾನ್ ಅವರು, ಸೆಮಿಸ್​ನಲ್ಲಿ ಭಾರತ ಗೆದ್ದಿರುವುದು ಸಂತೋಷ ತಂದಿದೆ. ಫೈನಲ್​ ಪಂದ್ಯದಲ್ಲೂ ಭಾರತ ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸುವೆ ಎಂದು ಹೇಳಿದ್ದಾರೆ.

ವಿಶ್ವಕಪ್​ನಲ್ಲಿ ಬೊಂಬಾಟ್ ಪ್ರದರ್ಶನ

ಪ್ರಸ್ತುತ ವಿಶ್ವಕಪ್​ನಲ್ಲಿ 6 ಪಂದ್ಯ ಆಡಿರುವ ಮೊಹಮ್ಮದ್ ಶಮಿ 23 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 5, ಇಂಗ್ಲೆಂಡ್ ವಿರುದ್ಧ 4, ಶ್ರೀಲಂಕಾ ವಿರುದ್ಧ 5, ದಕ್ಷಿಣ ಆಫ್ರಿಕಾ ವಿರುದ್ಧ 2 ಹಾಗೂ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಪಡೆದಿದ್ದಾರೆ. ಶಮಿ ತೂಫಾನ್ ದಾಳಿಗೆ ಎದುರಾಳಿ ತಂಡದ ಬ್ಯಾಟರ್​ಗಳು ಪೆವಿಲಿಯನ್ ಪೆರೇಡ್ ನಡೆಸುತ್ತಿದ್ದಾರೆ.

 

View this post on Instagram

 

A post shared by Haseen Jahan (@hasinjahanofficial)

RELATED ARTICLES

Related Articles

TRENDING ARTICLES