Wednesday, December 25, 2024

ನಾನು ಏನಾದರೂ ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಲಿ : ಡಿ.ಕೆ. ಶಿವಕುಮಾರ್ ಹೀಗೆ ಹೇಳಿದ್ದೇಕೆ?

ಬೆಂಗಳೂರು : ಲೂಲು ಮಾಲ್ ಅಕ್ರಮದ ಬಗ್ಗೆ ಆರೋಪ ವಿಚಾರ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನೋಡ್ರಿ.. ನಾನು ಮಾಲ್ ಕಟ್ಟಿರೋದು ಕೇಂದ್ರ ಸರ್ಕಾರದ ಒಂದು ಸಂಸ್ಥೆದು. ಅವರು ದಾಖಲೆ ಮಾಡಿ ಟೆಂಡರ್ ಹಾಕಿದ್ದಾರೆ. ಅದು ಕೇಂದ್ರ ಸರ್ಕಾರದ್ದು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ಸ್ನೇಹಿತರು ತೆಗೆದುಕೊಂಡಿದ್ದರು. ನಾನು ಅವರ ಹತ್ತಿರ ತೆಗೆದುಕೊಂಡಿದ್ದೇನೆ. ಏನಾದರೂ ತಪ್ಪು ಮಾಡಿದ್ರೆ, ಬೇಕಾದ್ರೆ ಗಲ್ಲಿಗೆ ಹಾಕಲಿ. ಅವರ ತಂದೆಗೆ 10 ರಿಂದ 15 ವರ್ಷದಿಂದನೇ ಅದ್ಯಾರೋ ಜಯರಾಜ್ ಅಂತಾ ಇದ್ರು. ಅವರ ಕೈಯಲ್ಲಿ ಏನೆನೋ ತನಿಖೆ ಮಾಡಿಸಿದ್ರು. ಈಗಲೂ ಬೇಕಾದ್ರು ಮಾಡಿಸಲಿ, ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿಸಿ. ನಾವು ಅದಕ್ಕೆ ರೆಡಿ ಇದ್ದೀವಿ ಎಂದು ಗುಡುಗಿದ್ದಾರೆ.

ಈ ಪೊಗರು, ಈ ಬ್ಲಾಕ್​ಮೇಲ್​ಗೆಲ್ಲಾ ನಾವು ಹೆದರಲ್ಲ ಅಂತ ಅವರಿಗೂ ಗೊತ್ತು. ಏನು ದಾಖಲೆ ಬೇಕೋ ಕೊಡ್ತೇನೆ. ಅವರು ದಾಖಲೆ ಕೇಳ್ತಾ ಇದ್ದರಲ್ಲ, ನಾವೇನೋ ಇಲಿಗಲ್ ಕರಂಟ್ ಕದ್ದಿದ್ದೇವೆ ಅಂತ. ಮಾಲ್ ಕಟ್ಟಿದವನೂ ನಾನಲ್ಲ, ಜಾಯಿಂಟ್ ಡೆವೆಲಪೆಂಟ್ ಕಟ್ಟಿದವರು. ಅವರಿಗೆ ಹೇಳ್ತೇನೆ ಅದೇನೂ ಕರೆಂಟ್ ಕದ್ದಿದ್ದೀರಾ ತೋರಿಸಿ ಅಂತ ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಆರೋಪಕ್ಕೆ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಕೊಡೋಣ ನೋ ಪ್ರಾಬ್ಲಂ

ಕುಮಾರಸ್ವಾಮಿ ಅವರು ಏನೆನೋ ಕೇಳ್ತಾರೆ, ಅದಕ್ಕೆಲ್ಲ ಜನ ಉತ್ತರ ಕೊಟ್ಟಿದ್ದಾರೆ. ಅವರ ಮಾತುಗಳಿಗೆ, ಆಚಾರ-ವಿಚಾರಗಳಿಗೆ ಜನ ಉತ್ತರಿಸಿದ್ದಾರೆ. ಇನ್ನು ಏನು ಬೇಕು ಅದನ್ನ ಕೊಡ್ತೇನೆ. ಏನೇನು ಪಟ್ಟಿಬೇಕು ಅಂದಿದ್ದಾರೆ ಅಲ್ವಾ? ಅದರ ಬಗ್ಗೆ ಕೊಡೋಣ ನೋ ಪ್ರಾಬ್ಲಂ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES