Thursday, October 31, 2024

ಪುರಾತನ ಕಾಲದ ನಿಧಿ ಪತ್ತೆ: ಕುಡಿಕೆ ತುಂಬೆಲ್ಲ ಚಿನ್ನದ ನಾಣ್ಯಗಳು!

ಮೈಸೂರು: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತಿ ಸಮೀಪದ ಈಶ್ವರ ದೇವಸ್ಥಾನದ ಪಕ್ಕದಲ್ಲಿ ಪುರಾತನ ನಿಧಿ ಪತ್ತೆಯಾಗಿದೆ.

ಆನಂದಪುರ ಗ್ರಾಮದ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ಈ ನಿಧಿ ಕಾಣಿಸಿಕೊಂಡಿದೆ. ಕಾರ್ಮಿಕರು ದೇವಾಲಯ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಭೂಮಿಯ ಅಡಿಯಲ್ಲಿ ಕುಡಿಕೆ ಪತ್ತೆಯಾಗಿದೆ. ಕುಡಿಕೆ ತೆರೆದು ನೋಡಿದಾಗ ಚಿನ್ನದ ಆಭರಣಗಳು ಹಾಗೂ ನಿಧಿ ಗೋಚರವಾಗಿದೆ.

ಇದನ್ನೂ ಓದಿ: ಶಾಲಾ ಮಕ್ಕಳಿಗೆ ಶೂ ಬದಲು ಚಪ್ಪಲಿ ಭಾಗ್ಯ!: ಪೋಷಕರು ಆಕ್ರೋಶ

ಸ್ಥಳಕ್ಕೆ ಸಿದ್ದಾಪುರ ಠಾಣೆ ಸಬ್ ಇನ್ಸ್​ಪೆಕ್ಟರ್ ಪಿ.ಎಂ. ರಾಘವೇಂದ್ರ ಭೇಟಿ‌ ನೀಡಿದ್ದಾರೆ. ವಿರಾಜಪೇಟೆ ತಹಶೀಲ್ದಾರ್ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ.

RELATED ARTICLES

Related Articles

TRENDING ARTICLES