ಬೆಂಗಳೂರು : ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ಮುಂದುವರೆದಿದೆ. ಗಾಜಾ ಮೇಲಿನ ಇಸ್ರೇಲ್ ಸೇನಾ ದಾಳಿಯನ್ನು ಅರಬ್, ಮುಸ್ಲಿಂ ದೇಶಗಳು ಖಂಡಿಸಿವೆ.
ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್-ಶಿಫಾವನ್ನು ಇಸ್ರೇಲ್ ಸೇನೆ ಸುತ್ತುವರೆದಿದೆ. ಆಸ್ಪತ್ರೆ ಸಮೀಪದಲ್ಲಿ ವೈಮಾನಿಕ ದಾಳಿ ಸೇರಿದಂತೆ ಬಾಂಬ್ ಸ್ಫೋಟಗಳು ನಡೆಯುತ್ತಿರುವುದರಿಂದ ಆಸ್ಪತ್ರೆಯ ಕಾರ್ಡಿಯಾಕ್ ವಾರ್ಡ್ ನಾಶವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆನ್ನಲ್ಲೇ ಸ್ಥಳಾಂತರ ಕಾರ್ಯಾಚರಣೆ ವೇಳೆ ಹಮಾಸ್‌ನಿಂದ ಯೋಧರ ಮೇಲೆ ಗುಂಡಿನ ದಾಳಿಯಾಗಿದೆ ಎಂದು ಐಡಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ ಗಾಜಾ ಮೇಲಿನ ದಾಳಿಗೆ ಮುಸ್ಲಿಂ ದೇಶಗಳು ಗರಂ ಆಗಿವೆ. ಇಸ್ರೇಲ್ ‘ಆತ್ಮರಕ್ಷಣೆ’ಯ ವಾದವನ್ನು ತಿರಸ್ಕರಿಸಿರುವ ಅರಬ್, ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಸೇನಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಇಸ್ರೇಲ್ ಸೇನೆಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸುವಂತೆ ಮುಸ್ಲಿಂ ರಾಷ್ಟ್ರಗಳಿಗೆ ಇರಾನ್ ಮನವಿ ಮಾಡಿದೆ.