Sunday, May 19, 2024

ಮಹಿಳೆಯರಿಗೆ 10 ಲಕ್ಷ ರೂ. ಬಡ್ಡಿರಹಿತ ಸಾಲ ನೀಡಲು ಚಿಂತನೆ : ಸಚಿವ ಈಶ್ವರ್ ಖಂಡ್ರೆ

ಬೀದರ್ : ರಾಜ್ಯ ಸರ್ಕಾರದ ವಾಗ್ದಾನದಂತೆ ಮಹಿಳೆಯರಿಗೆ 5 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ನೀಡಲಿದೆ. ಇದನ್ನ 10 ಲಕ್ಷ ರೂ. ವರಗೆ ಮಾಡಬೇಕೆಂದು ಸರ್ಕಾರ ಮಟ್ಟದಲ್ಲಿ ಪ್ರಯತ್ನ ಮಾಡುವೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಬೀದರ್​ನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವ-ಸಹಾಯ ಗುಂಪುಗಳ ದಿನಾಚರಣೆ, ಮಹಿಳಾ ಬಲವರ್ಧನೆ ಮತ್ತು ಸಶಕ್ತಿಕರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

ರಾಜ್ಯ ಸರ್ಕಾರದ ಪ್ರಮುಖ ಉದ್ದೇಶವೇ ಸ್ತ್ರೀ ಸಬಲೀಕರಣ. ಸರ್ಕಾರ ಈ ಉದ್ದೇಶವನ್ನು ಗೃಹಲಕ್ಷ್ಮೀ ಮತ್ತು ಶಕ್ತಿ ಯೋಜನೆಗಳ ಮೂಲಕ ಸಹಾಯ ಮಾಡುತ್ತಿದೆ. ಶಕ್ತಿ ಯೋಜನೆ ಅಡಿ ಜಿಲ್ಲಾದ್ಯಂತ 1 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆ ಅಡಿ ಸುಮಾರು 3.50 ಲಕ್ಷ ಅರ್ಹ ಫಲನುಭವಿಗಳಿದ್ದಾರೆ. ಈ ಯೋಜನೆಗಳಿಗಾಗಿ ವಾರ್ಷಿಕವಾಗಿ, ಬೀದರ್ ಜಿಲ್ಲೆಗೆ ಸರ್ಕಾರ 1,400 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್ ನಲ್ಲಿ ಸುಮಾರು 37,000 ಸ್ವಸಹಾಯ ಗುಂಪುಗಳಿವೆ. ಇದರಿಂದ ಜಿಲ್ಲೆಯ 5 ಲಕ್ಷ ಮಹಿಳೆಯರಿಗೆ ಆರ್ಥಿಕವಾಗಿ ಸಬಲ ಮಾಡಿದೆ. ಸುಮಾರು 800 ಕೋಟಿ ರೂಪಾಯಿಗಳ ಸಾಲ ಸ್ವಸಹಾಯ ಸಂಘಗಳಿಗೆ ನೀಡಲಾಗಿದ್ದು ಶೇ.99 ರಷ್ಟು ಸಾಲ ಮರುಪಾವತಿ ಇದೆ ಎಂದು ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ.

ಸಹಕಾರ ಕ್ಷೇತ್ರಕ್ಕೆ 100 ವರ್ಷಗಳ ಇತಿಹಾಸ

ಯಾವುದೇ ಪ್ರದೇಶದ ಅಭಿವೃದ್ಧಿಗಾಗಿ ಆ ಪ್ರದೇಶದ ಜನರು ಆರ್ಥಿಕವಾಗಿ ಚೆನ್ನಾಗಿ ಸುಸ್ಥಿತಿಯಲ್ಲಿರಬೇಕು. ಬೀದರ್ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರಕ್ಕೆ 100 ವರ್ಷಗಳಿಂದ ಹೆಚ್ಚಿನ ಇತಿಹಾಸವಿದೆ. ಆರ್.ವಿ. ಬಿದಪ್ಪ ಹಾಗೂ ಹಲವಾರು ಸಹಕಾರ ಕ್ಷೇತ್ರ ನಾಯಕರು ಬೀದರ್ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅನ್ನು 1922ರಲ್ಲಿ ಸ್ಥಾಪಿಸಿದರು. 1985ರಲ್ಲಿ ಗುರುಪದಪ್ಪ ನಾಗರಂಪಳ್ಳಿ ಡಿಸಿಸಿ ಬ್ಯಾಂಕ್ ಬೀದರ್ ಅಧ್ಯಕ್ಷತೆಯನ್ನು ವಹಿಸಿದರು. ಜಿಲ್ಲೆಯ ಶೇ.80 ಜನರು ಕೃಷಿ ಮೇಲೆ ನಿರ್ಭರರಾಗಿದ್ದಾರೆ. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ರಾಷ್ಟ್ರೀಯ ಬ್ಯಾಂಕ್ಗಳನ್ನು ಹಿಂದೆ ಬಿಟ್ಟು ಬೆಳೆದಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES